
BIG 3 Impact: ಚಿತ್ರದುರ್ಗ ಪಾಪೇನಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿ ಪುನಾರಂಭ
ಏಷ್ಯಾನೆಟ್ ಸುವರ್ಣ ನ್ಯೂಸ್ ಜನಪ್ರಿಯ ಕಾರ್ಯಕ್ರಮ ಬಿಗ್3 ಯಲ್ಲಿ ಒಂದು ಸಮಸ್ಯೆಯನ್ನು ಪ್ರಸಾರ ಮಾಡಲಾಯಿತು ಅಂದರೆ ಅದಕ್ಕೆ ಪರಿಹಾರ ಸಿಗುವವರೆಗೂ ಬಿಡುವುದಿಲ್ಲ. ಇದನ್ನೂ ಸಾಕಷ್ಟು ಸಲ ನಿರೂಪಿಸಿದೆ.
ಬೆಂಗಳೂರು (ಜೂ. 20): ಏಷ್ಯಾನೆಟ್ ಸುವರ್ಣ ನ್ಯೂಸ್ ಜನಪ್ರಿಯ ಕಾರ್ಯಕ್ರಮ ಬಿಗ್3 (BIG3) ಯಲ್ಲಿ ಒಂದು ಸಮಸ್ಯೆಯನ್ನು ಪ್ರಸಾರ ಮಾಡಲಾಯಿತು ಅಂದರೆ ಅದಕ್ಕೆ ಪರಿಹಾರ ಸಿಗುವವರೆಗೂ ಬಿಡುವುದಿಲ್ಲ. ಇದನ್ನೂ ಸಾಕಷ್ಟು ಸಲ ನಿರೂಪಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿತ್ರದುರ್ಗ: ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ, ಮರದ ಕೆಳಗೆ ಮಕ್ಕಳಿಗೆ ಪಾಠ
ಚಿತ್ರದುರ್ಗದ (Chitradurga) ಪಾಪೇನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಕೊಠಡಿ, ಕಟ್ಟಡ ಇಲ್ಲದೇ ಬಯಲಲ್ಲಿ ಪಾಠ ಕೇಳುತ್ತಿದ್ದರು. ನೂತನ ಕಟ್ಟಡವನ್ನು ಅರ್ಧಂಬರ್ಧ ಕಟ್ಟಿ ಕಂಟ್ರಾಕ್ಟರ್ ಕಾಣೆಯಾಗಿದ್ದ. ಈ ಬಗ್ಗೆ ಬಿಗ್ 3 ಸಂಬಂಧಪಟ್ಟ ಅಧಿಕಾರಿಗಳು, ಶಾಸಕರನ್ನು ತರಾಟೆಗೆ ತೆಗೆದುಕೊಂಡಿತ್ತು. ಕೂಡಲೇ ತಹಶೀಲ್ದಾರ್, ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರ್ಧಂಬರ್ಧ ಆಗಿದ್ದ ಕಟ್ಟಡ ಕಾಮಗಾರಿ ಈಗ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.