ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.

First Published Dec 4, 2020, 2:19 PM IST | Last Updated Dec 4, 2020, 2:19 PM IST

ಬೆಂಗಳೂರು (ಡಿ. 04): ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.  

6 ಲಕ್ಷ ಪಿಎಫ್ ಹಣದಿಂದ ಲಿಂಬೆ ಗಿಡ ಬೆಳೆಯುತ್ತಾರೆ. ಆದರೆ ನಿಂಬೆಹಣ್ಣಿನಲ್ಲಿ ರಸವೇ ಬರುತ್ತಿರಲಿಲ್ಲ. ಆಗ ಅವರಿಗೆ ಮೋಸವಾಗಿರುವುದು ಗೊತ್ತಾಗುತ್ತದೆ. ಇದರಿಂದ ಬಸವರಾಜ್ ಪಾಟೀಲರು ಕಂಗಾಲಾಗಿ ಬಿಗ್ 3 ನೆರವು ಕೇಳುತ್ತಾರೆ. ಬಿಗ್ 3 ಈ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಾರೆ. ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.