Asianet Suvarna News Asianet Suvarna News

ಬೀದರ್ : ಲಾಕ್ಡೌನ್‌ನಲ್ಲಿ ಹಸಿದವರ ಪಾಲಿನ ರಿಯಲ್ ಹೀರೋ ಚಂದ್ರ ಸಿಂಗ್

Jun 28, 2021, 2:30 PM IST

ಬೆಂಗಳೂರು (ಜೂ. 28): ಲಾಕ್‌ಡೌನ್‌ನಿಂದ ಅದೆಷ್ಟೋ ಮಂದಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಇನ್ನು ಅದೆಷ್ಟೋ ಮಂದಿಗೆ ಉದ್ಯೋಗವಿಲ್ಲ, ದಿನಸಿ ಖರೀದಿ ಮಾಡಲು ಹಣವಿಲ್ಲ ಎಂಬ ಸ್ಥಿತಿ ಉಂಟಾಗಿದೆ. ಇಂತವರ ನೆರವಿಗೆ ಸಾಕಷ್ಟು ಮಂದಿ ಧಾವಿಸಿದ್ದಾರೆ.

ಅಂತವರಲ್ಲಿ ಒಬ್ಬರು ಬೀದರ್‌ನ ಚಂದ್ರಸಿಂಗ್. ಇವರು ಮಾಜಿ ಸಿಎಂ ದಿ. ಧರಂಸಿಂಗ್ ಅವರ ಅಳಿಯ. ಸಂಕಷ್ಟದಲ್ಲಿರುವ ಜನರ ನಡುವೆ ನಿಂತು ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಆಂಬುಲೆನ್ಸ್ ಸೇವೆ, ಫುಡ್ ಕಿಟ್, ದಿನಸಿ, ಅಗತ್ಯ ವಸ್ತುಗಳ ಪೂರೈಕೆ ಹೀಗೆ ಸಾಧ್ಯವಾದಷ್ಟರ ಮಟ್ಟಿಗೆ ಜನರಿಗೆ ನೆರವು ನೀಡಿದ್ದಾರೆ. ಚಂದ್ರ ಸಿಂಗ್ ಕಾರ್ಯವೈಖರಿ ಬಗ್ಗೆ ಒಂದು ವರದಿ ಇಲ್ಲಿದೆ. 

Video Top Stories