3 ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ನಿಮ್ಮ ಮನೆಯ ‌ವಿದ್ಯುತ್ ಸಂಪರ್ಕ ಲೈಸೆನ್ಸ್ ರದ್ದು

ಬೆಸ್ಕಾಂ ಗ್ರಾಹಕರೇ, ಕರೆಂಟ್‌ ಬಿಲ್‌ ಬಾಕಿವುಳಿಸಿದರೆ ಇನ್ಮುಂದೆ ಶಾಕ್‌ ಪಕ್ಕಾ! ಬಿಲ್ ಕಟ್ಟದಿದ್ರೆ  ಕರೆಂಟ್‌ ಸಪ್ಲೈ ಕಟ್‌ ಮಾಡೋದಷ್ಟೇ ಅಲ್ಲ, ಸಂಪರ್ಕವನ್ನೂ ಕಟ್‌ ಮಾಡೋದಕ್ಕೆ ಬೆಸ್ಕಾಂ ಮುಂದಾಗಿದೆ. 

First Published Nov 17, 2022, 11:36 AM IST | Last Updated Nov 17, 2022, 11:36 AM IST

ಬೆಂಗಳೂರು (ನ.17): ಬೆಸ್ಕಾಂ ಗ್ರಾಹಕರೇ, ಕರೆಂಟ್‌ ಬಿಲ್‌ ಬಾಕಿವುಳಿಸಿದರೆ ಇನ್ಮುಂದೆ ಶಾಕ್‌ ಪಕ್ಕಾ! ಬಿಲ್ ಕಟ್ಟದಿದ್ರೆ  ಕರೆಂಟ್‌ ಸಪ್ಲೈ ಕಟ್‌ ಮಾಡೋದಷ್ಟೇ ಅಲ್ಲ, ಸಂಪರ್ಕವನ್ನೂ ಕಟ್‌ ಮಾಡೋದಕ್ಕೆ ಬೆಸ್ಕಾಂ ಮುಂದಾಗಿದೆ. ಹೌದು! ಇನ್ಮುಂದೆ 3 ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಸಿಬ್ಬಂದಿ ಕರೆಂಟ್ ಫ್ಯೂಸ್ ತೆಗೆಯಲ್ಲ ಬದಲಾಗಿ ನಿಮ್ಮ ಮನೆಯ ‌ವಿದ್ಯುತ್ ಸಂಪರ್ಕದ ಲೈಸೆನ್ಸ್‌ನನ್ನೇ ರದ್ದು ಮಾಡ್ತಾರೆ. ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ ಮೇಲೆ ಬೆಸ್ಕಾಂ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇನ್ಮೇಲೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇದ್ದರೆ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇಬೇಕು. ವಿದ್ಯುತ್ ಬಿಲ್ ಪಾವತಿಸುವಲ್ಲಿ ವಿಳಂಬ ಮಾಡಿದ್ರೆ, ಕರೆಂಟ್ ಇಲ್ಲದೆ ಕತ್ತಲಲ್ಲೇ ಜೀವನ ನಡೆಸುವಂತಹ ಸ್ಥಿತಿ ಉಂಟಾಗಲಿದೆ. ಬೆಸ್ಕಾಂನ ಹೊಸ ಯೋಜನೆಯಿಂದ ಹೊರ ದೇಶಗಳಿಗೆ ಪ್ರಯಾಣ ಬೆಳೆಸುವವರು, ಬಾಕಿ ಬಿಲ್ ಉಳಿಸಿಕೊಂಡವರಿಗೆ ಆತಂಕ ಶುರುವಾಗಿದೆ.