News Hour: 10 ವರ್ಷಗಳ ನಂತರ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್!
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದೆ. 10 ವರ್ಷಗಳ ನಂತರ ಬೆಂಗಳೂರಿನಲ್ಲಿ ಬ್ಲಾಸ್ಟ್ ನಡೆದಿದೆ. 10 ಸೆಕೆಂಡ್‌ಗಳ ಅಂತರದಲ್ಲೇ ಎರಡು ಬಾರಿ ಐಇಡಿ ಸ್ಫೋಟವಾಗಿದೆ. 9 ಜನರಿಗೆ ಗಂಭೀರ ಗಾಯವಾಗಿದೆ.
ಬೆಂಗಳೂರು (ಮಾ.1): ಮಾರ್ಚ್ ತಿಂಗಳ ಮೊದಲ ದಿನದಂದೇ ಸಂಭವಿಸಿದ ಬಾಂಬ್ ಬ್ಲಾಸ್ಟ್ ಬೆಂಗಳೂರಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ರಾಮೇಶ್ವರಂ ಕಫೆಯಲ್ಲಿ ಅದ ಭೀಕರ ಬಾಂಬ್ ಬ್ಲಾಸ್ಟ್‌ನ ಎಕ್ಸ್ ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿಗಳು ಕೂಡ ಬೆಚ್ಚಿಬೀಳಿಸುವಂತಿದೆ.
10 ಸೆಕೆಂಡ್‌ಗಳ ಅಂತರದಲ್ಲಿಯೇ ಎರಡು ಬಾರಿ ಐಇಡಿ ಸ್ಫೋಟ ಸಂಭವಿಸಿದೆ. ಇದರಲ್ಲಿ 9 ಜನರಿಗೆ ಗಂಭೀರ ಗಾಯವಾಗಿದೆ. ಕೆಫೆಯ ಸಿಸಿಟಿವಿ ದೃಶ್ಯಾವಳಿ ಎದೆನಡುಗಿಸುವಂತಿದ್ದು, ಜೀವ ಉಳಿಸಿಕೊಳ್ಳಲು ಗ್ರಾಹಕರು ದಿಕ್ಕಾಪಾಲಾಗಿ ಓಡಿದ್ದಾರೆ. ಬಾಂಬ್ ಸ್ಫೋಟದ ರಭಸಕ್ಕೆ ರಾಮೇಶ್ವರಂ ಕೆಫೆ ಛಿದ್ರಛಿದ್ರವಾಗಿದೆ.
Exclusive: ರಾಮೇಶ್ವರಂ ಕಫೆಯಲ್ಲಿನ ಸ್ಪೋಟದ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯ!
ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಇದು ಐಇಡಿ ಸ್ಪೋಟ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಉಗ್ರ ಕೃತ್ಯವಾ.. ವ್ಯಾಪಾರ ದ್ವೇಷವಾ ತನಿಖೆ ಮಾಡ್ತೀವಿ ಎಂದ ಡಿಕೆಶಿ ಹೇಳಿದ್ದಾರೆ. ಇದು ಓಲೈಕೆ ಪರಿಣಾಮ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.