Bengaluru Meat Mafia : ಬಗೆದಷ್ಟೂ ಬಿಗಡಾಯಿಸುತ್ತಲೇ ಇದೆ ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಮಾಂಸ ಪ್ರಕರಣ!

ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿರುವ ಮಾಂಸದ ಹಿಂದಿದೆ ಬೆಚ್ಚಿ ಬೀಳಿಸುವ ಘಟನೆಗಳು. ಪೊಲೀಸರು ಪ್ರಕರಣವನ್ನು ಭೇದಿಸಿದಷ್ಟೂ ಬಿಗಡಾಯಿಸುತ್ತಲೇ ಹೋಗುತ್ತಿದೆ.

First Published Jul 30, 2024, 6:33 PM IST | Last Updated Jul 30, 2024, 6:33 PM IST

ರಾಜಸ್ಥಾನದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ರೈಲಲ್ಲಿ ಬಂದ  ಮಟನ್ ಎಷ್ಟು ಸೇಫ್? ಬೆಚ್ಚಿಬೀಳಿಸೋ ದೃಶ್ಯಗಳು.. ಅರ್ಥವಾಗದ ಲಿಂಕ್ಗಳು.. ಬಗೆದಷ್ಟೂ ಬಿಗಡಾಯಿಸಿದ್ದೇಕೆ ಈ ಪ್ರಕರಣ ಪ್ರಕರಣ.. ನೋಟಿಸ್ ಮೇಲೆ ನೋಟಿಸ್ ಕೊಟ್ಟಾಯ್ತು.. ತನಿಖೆ ಹಿಂದೆ ತನಿಖೆ ಶುರುವಾಯ್ತು. ಒಂದು ಕಡೆ ರಾಜಸ್ತಾನದಿಂದ ರಾಜ್ಯಕ್ಕೆ ಬರ್ತಿರೋ ಈ ಮಾಂಸಕ್ಕೆ ಯಾವ ಹಿನ್ನೆಲೆ ಇದೆ ಅನ್ನೋದರ ತಲಾಷ್ ನಡೀತಿದೆ..

ಇನ್ನೊಂದು ಕಡೆ ಈ ಮಾಂಸದ ಇತಿಹಾಸವನ್ನೂ ಅಗೆಯೋ ಪ್ರಯತ್ನ ನಡೀತಿದೆ.. ಬೆಂಗಳೂರಿಗೆ ಬರ್ತಾ ಇರೋದು ಯಾವ ಮಾಂಸ.? ಹೀಗೆ ಬಂದ ಮಾಂಸ ಎಲ್ಲೆಲ್ಲಿ ಪ್ರವೇಶಿಸಿದೆ? ಇದರ ಹಿಂದೆ ಇರೋದು ಯಾರು? ತನಿಖೆಯೇನೋ ದೊಡ್ಡಮಟ್ಟದಲ್ಲೇ ನಡೀತಿದೆ.. ಆದ್ರೆ ಎಲ್ಲವೂ ನಿಂತಿರೋದು, ಆ ವರದಿಯ ಬಗ್ಗೆ. ಮಾಂಸಪ್ರಿಯರಿಗೆ ಅತಿ ದೊಡ್ಡ ಆತಂಕ ಹುಟ್ಟಿಸಿದ ಸುದ್ದಿ ಅಂದ್ರೆ, ಕುರಿ ಮಾಂಸ ಅಂತ ನಾಯಿ ಮಾಂಸ ಮಾರ್ತಿದ್ದಾರೆ ಅನ್ನೋದು..