
ಟ್ಯಾಕ್ಸ್ ಕಟ್ಟಿಲ್ಲ ಮಂತ್ರಿಮಾಲ್, ಡೆಡ್‌ಲೈನ್‌ಗೂ ಡೋಂಟ್‌ಕೇರ್, ಬಿಬಿಎಂಪಿ ಮಾತ್ರ ಸೈಲೆಂಟ್!
ಆಸ್ತಿ ತೆರಿಗೆ ವಿಚಾರದಲ್ಲಿ ಬಿಬಿಎಂಪಿ ಕಳ್ಳಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಲ್ಲೇಶ್ವರಂನ ಮಂತ್ರಿ ಮಾಲ್‌ನಿಂದ ಕೋಟಿ ಕೋಟಿ ತೆರಿಗೆ ವಂಚನೆಯಾಗಿದೆ. 37 ಕೋಟಿ ರೂ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಆದರೂ ಬಿಬಿಎಂಪಿ ಮಾತ್ರ ಶಿಸ್ತುಕ್ರಮಕ್ಕೆ ಮುಂದಾಗಿಲ್ಲ.
ಬೆಂಗಳೂರು (ಜೂ. 16): ಆಸ್ತಿ ತೆರಿಗೆ ವಿಚಾರದಲ್ಲಿ ಬಿಬಿಎಂಪಿ (BBMP) ಕಳ್ಳಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಲ್ಲೇಶ್ವರಂನ ಮಂತ್ರಿ ಮಾಲ್‌ನಿಂದ (Mantri Mall) ಕೋಟಿ ಕೋಟಿ ತೆರಿಗೆ ವಂಚನೆಯಾಗಿದೆ. 37 ಕೋಟಿ ರೂ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಆದರೂ ಬಿಬಿಎಂಪಿ ಮಾತ್ರ ಶಿಸ್ತುಕ್ರಮಕ್ಕೆ ಮುಂದಾಗಿಲ್ಲ.
Central jail Exposes: ತನಿಖಾ ವರದಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯದ್ದೇ ಸದ್ದು!
ತೆರಿಗೆ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಲಾಗುವುದು ಎಂದು 2021ನೇ ವರ್ಷದ ಆರಂಭದಲ್ಲೇ ಮಂತ್ರಿಮಾಲ್ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಆಡಳಿತ ಮಂಡಳಿ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಇದರಿಂದ ಬೀಗ ಹಾಕಲಾಗಿದೆ ಎಂದು 2021ರ ಡಿ.10ರಂದು ನಡೆದ ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿತ್ತು. ಆ ನಂತರ ಬಿಬಿಎಂಪಿ ಅಧಿಕಾರಿಗಳು ಯಾವುದೇ ಶಿಸ್ತುಕ್ರಮಕ್ಕೆ ಮುಂದಾಗಿಲ್ಲ, ಮೌನ ವಹಿಸಿದ್ದಾರೆ.