ಕೆಆರ್ ಮಾರ್ಕೆಟ್ ತೆರೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ; ವ್ಯಾಪಾರಿಗಳ ಮನವಿ
ಬಸ್ ಸಂಚಾರ, ಮಾಲ್‌ಗಳು ಮತ್ತು ದೇವಾಲಯಗಳಿಗೆ ಅವಕಾಶ ನೀಡಿರುವ ಸರ್ಕಾರ ಮಾರುಕಟ್ಟೆಗಳಲ್ಲಿ ಹಣ್ಣು- ತರಕಾರಿ, ಹೂವು ವ್ಯಾಪಾರಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ರೈತರು, ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜು. 05): ಬಸ್ ಸಂಚಾರ, ಮಾಲ್‌ಗಳು ಮತ್ತು ದೇವಾಲಯಗಳಿಗೆ ಅವಕಾಶ ನೀಡಿರುವ ಸರ್ಕಾರ ಮಾರುಕಟ್ಟೆಗಳಲ್ಲಿ ಹಣ್ಣು- ತರಕಾರಿ, ಹೂವು ವ್ಯಾಪಾರಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ರೈತರು, ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಿಂದ ವ್ಯಾಪಾರ, ವಹಿವಾಟಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ತಕ್ಷಣ ಮಾರುಕಟ್ಟೆಗಳ ಪುನಾರಂಭಕ್ಕೆ ಅವಕಾಶ ಮಾಡಿಕೊಡಬೇಕೆಂದು ರೈತರು ಆಗ್ರಹಿಸಿದ್ಧಾರೆ.