Asianet Suvarna News Asianet Suvarna News

ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಲು ಮೀನಾಮೇಷ, ಜಮೀರ್ ಒತ್ತಡವಿದೆಯಾ.?

ಈದ್ಗಾ ಮೈದಾನವನ್ನು ಬಿಬಿಎಂಪಿ ಆಸ್ತಿ ಎಂದು ಘೋಷಿಸಲು ಬಿಬಿಎಂಪಿ ಮೀನಾಮೆಷ ಎಣಿಸುತ್ತಿದೆ. ಮೈದಾನದ ಒಡೆತನದ ದಾಖಲೆ ನೀಡಲು ವಕ್ಫ್ ಬೋರ್ಡ್ ವಿಫಲವಾಗಿದೆ. 

Aug 5, 2022, 12:05 PM IST

ಬೆಂಗಳೂರು (ಆ. 05): ಈದ್ಗಾ ಮೈದಾನವನ್ನು (Idgah Maidan) ಬಿಬಿಎಂಪಿ (BBMP)  ಆಸ್ತಿ ಎಂದು ಘೋಷಿಸಲು ಬಿಬಿಎಂಪಿ ಮೀನಾಮೆಷ ಎಣಿಸುತ್ತಿದೆ. ಮೈದಾನದ ಒಡೆತನದ ದಾಖಲೆ ನೀಡಲು ವಕ್ಫ್ ಬೋರ್ಡ್ ವಿಫಲವಾಗಿದೆ. ಸೂಕ್ತ ದಾಖಲೆ ಒದಗಿಸಲು ಬಿಬಿಎಂಪಿ ಕಾಲಾವಕಾಶ ನೀಡಿತ್ತು, ಗಡುವು ಮುಗಿದರೂ ವಕ್ಫ್ ಬೋರ್ಡ್ ದಾಖಲೆ ಸಲ್ಲಿಸಿಲ್ಲ. ವಕ್ಫ್ ಬೋರ್ಡ್ ಸಮಿತಿ ಜೊತೆ ಬಿಬಿಎಂಪಿ ಆಫೀಸರ್ಸ್ ಸಭೆ ನಡೆಸಿದ್ದಾರೆ. ಸಭೆ ನಡೆದು   2 ದಿನವಾದರೂ ತೀರ್ಪು ಹೊರ ಬಂದಿಲ್ಲ. ಬಿಬಿಎಂಪಿಯ ಈ ನಿಲುವಿನ ಹಿಂದೆ ಯಾರದ್ದಾದರೂ ಒತ್ತಡ ಇದೆಯಾ..? ಬಿಬಿಎಂಪಿ ಹಿಂಜರಿಕೆ ಹಿಂದೆ ಶಾಸಕ ಜಮೀರ್ ಒತ್ತಡ ಇದೆಯಾ.? ಎಂಬ ಪ್ರಶ್ನೆ ಮೂಡಿದೆ.

ಲಿಂಗಾಯತ ಸಮುದಾಯ ಸೆಳೆಯಲು ಕಾಂಗ್ರೆಸ್ ಕಸರತ್ತು, ಮಠಗಳಿಗೆ ರಾಹುಲ್ ಭೇಟಿ