ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್ ಹೆಲ್ತ್ ಅಪ್ಡೇಟ್
ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ಚೀನಾದ HMPV ವೈರಸ್ ಪತ್ತೆಯಾಗಿದ್ದು, ಚಿಕಿತ್ಸೆ ನಂತರ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಮಗುವಿನಲ್ಲಿ ಯಾವುದೇ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ 8 ತಿಂಗಳ ಮಗುವಿಗೆ ಕಾಣಿಸಿಕೊಂಡಿದ್ದ ಚೀನಾದ ಹೆಚ್‌ಎಂಪಿ ವೈರಸ್ ಬಗ್ಗೆ ಆರೋಗ್ಯ ಇಲಾಖೆಯಿಂದ ಅಪ್ಡೇಟ್ ಮಾಹಿತಿ ನೀಡಲಾಗಿದೆ. ಈ ಮಗು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಈ ಮಗುವಿನ ಆರೋಗ್ಯದಲ್ಲಿ ಯಾವುದೇ ಗಂಭೀರ ಅನಾರೋಗ್ಯದ ಲಕ್ಷಣಗಳು ಇರಲಿಲ್ಲ. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚೀನಾದ ಹೆಚ್‌ಎಂಪಿ ವೈರಸ್‌ಗೆ ತುತ್ತಾಗಿರುವ 2ನೇ ಕೇಸ್ 8 ವರ್ಷದ ಮಗುವಿಗೆ ಆರೋಗ್ಯ ಸುಧಾರಿಸಿದೆ. ಈ ಮಗುವನ್ನು ಮಧ್ಯಾಹ್ನ 3 ಗಂಟೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು. 8 ತಿಂಗಳ ಸ್ನೇಹಲ್ ಎಂಬ ಮಗು ಕಳೆದೊಂದು ವಾರದಿಂದ ಅನಾರೋಗ್ಯ ಸಮಸ್ಯೆ ಇದ್ದು, ಆಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಗೆ ಬಂದು ಮಗು ದಾಖಲಾದಾಗ ಜ್ವರ, ಶೀತ, ನೆಗಡಿ ಕಂಡುಬಂದಿದ್ದು, ಹೆಚ್‌ಎಂಪಿ ವೈರಸ್ ಇರುವುದು ಪತ್ತೆಯಾಗಿತ್ತು. ಎರಡು ದಿನಗಳ ಕಾಲ ಮಗುವನ್ನು ನಿಗಾದಲ್ಲಿ ಇರಿಸಲಾಗಿದ್ದು, ನಂತರ ಚೇತರಿಕೆ ಕಾಣಿಸಿಕೊಂಡ ನಂತರ ಮನೆಗೆ ಕಳುಹಿಸಲಾಗುತ್ತದೆ.
ಇನ್ನು ಈ ಬಗ್ಗೆ ಮಾತನಾಡಿದ ಪೋಷಕರು ಹೆಚ್‌ಎಂಪಿವಿ ವೈರಸ್ ತಗುಲಿದ ಬಗ್ಗೆ ನಮಗೆ ನಂಬಿಕೆಯಿಲ್ಲ. ಕಾರಣ ನಾವು ಮಗುವನ್ನು ಕರೆದುಕೊಂಡು ಎಲ್ಲಿಗೂ ಹೊರಗಡೆ ಹೋಗಿಲ್ಲ. ನಾವು ಇನ್ನೊಂದು ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿ ಖಚಿತಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.