Belagavi Riot: ಮರಾಠಿ ಪುಂಡಾಟಿಕೆ ವಿರುದ್ಧ ಕನ್ನಡಿಗರ ಶಕ್ತಿಪ್ರದರ್ಶನ, ಎಂಇಎಸ್ ನಿಷೇಧಕ್ಕೆ ಜನಾಗ್ರಹ.!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂಥ (Sangolli Rayanna) ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳಿಗೆ ಅವಮಾನ ಮಾಡಿದ ಎಂಇಎಸ್‌ (MES) ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆ ನಡೆದಿದೆ.

 

First Published Dec 21, 2021, 9:59 AM IST | Last Updated Dec 21, 2021, 9:59 AM IST

ಬೆಂಗಳೂರು (ಡಿ. 21): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂಥ (Sangolli Rayanna) ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳಿಗೆ ಅವಮಾನ ಮಾಡಿದ ಎಂಇಎಸ್‌ (MES) ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆ ನಡೆದಿದೆ.ನಾಡದ್ರೋಹಿ ಎಂಇಎಸ್‌ ನಿಷೇಧಕ್ಕೆ ಭಾರೀ ಜನಾಗ್ರಹ ವ್ಯಕ್ತವಾಗಿದೆ.

Belagavi Riot: ಪುಂಡರ ಮೇಲೆ ಗೂಂಡಾಕಾಯ್ದೆ, ದೇಶದ್ರೋಹ ಕೇಸ್, ಮತಾಂತರ ನಿಷೇಧಕ್ಕೆ ಅಸ್ತು

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು ಸೇರಿ ಅನೇಕ ಕನ್ನಡಪರ ಸಂಘಟನೆಗಳು  ಬೃಹತ್‌ ಶಕ್ತಿಪ್ರದರ್ಶನ ನಡೆಸಿದ್ದು, ರಾಜ್ಯಾದ್ಯಂತ ವಿವಿಧ ಸಂಘಟನೆಗಳೂ ಪ್ರತಿಭಟನೆ, ರ್ಯಾಲಿಗಳ ಮೂಲಕ ಎಂಇಎಸ್‌ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿವೆ. ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಎಂಇಎಸ್‌ ಪುಂಡರನ್ನು ಸದೆಬಡಿಯುವಂತೆ ಸರ್ಕಾರವನ್ನು ಒತ್ತಾಯಿಸಿವೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಾರಿಗೆ ಸಚಿವ ಶ್ರೀರಾಮುಲು ಸೇರಿ ಹಲವು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಎಂಇಎಸ್‌ ನಿಷೇಧದ ಆಗ್ರಹಕ್ಕೆ ದನಿಗೂಡಿಸಿದರೆ, ಕನ್ನಡಪರ ಹೋರಾಟಗಾರರಾದ ನಾರಾಯಣಗೌಡ, ಪ್ರವೀಣ್‌ ಶೆಟ್ಟಿ, ಶಿವರಾಮೇಗೌಡ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ನಾಡದ್ರೋಹಿಗಳನ್ನು ನಿಷೇಧಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.