Belagavi Border Isuue : ಮತ್ತೆ ಮಹಾರಾಷ್ಟ್ರ ಕಿರಿಕ್: ಎಂಇಎಸ್‌ ಮಹಾಮೇಳಾವ್‌'ಗೆ ಬರುವುದಾಗಿ ಧೈರ್ಯಶೀಲ ಮಾನೆ ಪತ್ರ

ಬೆಳಗಾವಿ ಅಧಿವೇಶನ ಆರಂಭ ದಿನವೇ ಮಹಾರಾಷ್ಟ್ರ ಕಿರಿಕ್  ಮಾಡಲು ಪ್ಲಾನ್ ನಡೆಸಿದ್ದು, ನಾಳೆ ನಾಡದ್ರೋಹಿ ಎಂಇಎಸ್‌ ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದೆ.
 

Share this Video
  • FB
  • Linkdin
  • Whatsapp

ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭದ ದಿನದಂದೇ ಎಂಇಎಸ್ ಮಹಾಮೇಳಾವ್‌ ನಡೆಸಲು ತಯಾರಿ ಮಾಡಿಕೊಂಡಿದೆ. ಎಂಇಎಸ್‌ ಮಹಾಮೇಳಾವ್‌'ಗೆ ಶಿವಸೇನಾ ಸಂಸದ, ಗಡಿ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಬರುತ್ತಿದ್ದಾರೆ. ಬೆಳಗಾವಿ ನಗರ ಪೊಲೀಸ್‌ ಆಯುಕ್ತರಿಗೆ ಮಹರಾಷ್ಟ್ರ ಸಂಸದ ಪತ್ರ ಬರೆದಿದ್ದು, ವೈ ಪ್ಲಸ್‌ ಕೆಟಗರಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಎಸ್ಕಾರ್ಟ್ ಸಮೇತ ಭದ್ರತೆ ನೀಡುವಂತೆ ಸಂಸದ ಮನವಿ ಮಾಡಿದ್ದು, ನಾಳೆ ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ಮಹಾಮೇಳಾವ್‌ ನಡೆಯಲಿದೆ. ಅಮಿತ್ ಶಾ ಸೂಚನೆ ಧಿಕ್ಕರಿಸಿ ಬೆಳಗಾವಿಗೆ ಮಹಾರಾಷ್ಟ್ರ ಸಂಸದ ಬರುತ್ತಿದ್ದಾರೆ.

Related Video