ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ: ಮನೆ ಬಿಟ್ಟು ಹೋದ ಬಿಕಾಂ ವಿದ್ಯಾರ್ಥಿ ಮೋಹಿತ್!

ದೇವರು ನನ್ನನ್ನು ಈ ಸ್ವಾರ್ಥ ಪ್ರಪಂಚದಿಂದ ಕರೆದು ಜನರ ಕಲ್ಯಾಣಕ್ಕಾಗಿ ಆರಿಸಿದ್ದಾನೆ. ಆದ್ದರಿಂದ ಮೋಹಿತ್​​ ಋಷಿ ಎಂಬ ನಾನು ಈ ರಾಜಭೋಗ ಮತ್ತು ಮೋಹ ಮಾಯೆಯನ್ನು ತ್ಯಾಗ ಮಾಡಿ, ಭ್ರಮೆಯನ್ನು ತ್ಯಜಿಸಿ ಅಸತ್ಯದಿಂದ ಸತ್ಯದ ಕಡೆಗೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ. ದಯವಿಟ್ಟು ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರದಲ್ಲಿ ಬರೆದಿಟ್ಟು ಹೋಗಿದ್ದಾನೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.25): ನಾನು ದೇವರ ಮಗ ಅಂತ ಹೇಳಿ ಬಿಕಾಂ ವಿದ್ಯಾರ್ಥಿ ಮನೆ ಬಿಟ್ಟು ಹೋಗಿದ್ದಾನೆ. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾದ ಅರ್ಜುನ್​​ ಪುತ್ರ ಮೋಹಿತ್ ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಬಿಇಎಲ್​ ಕಾಲೇಜಲ್ಲಿ ಬಿಕಾಂ ಓದುತ್ತಿದ್ದ ಮೋಹಿತ್, ಮೊಬೈಲನ್ನ ಕೂಡ ಮನೆಯಲ್ಲೇ ಬಿಟ್ಟಿದ್ದಾನೆ. ಜನವರಿ 16ರಂದು ಬೆಳಗಿನ ಜಾವ ಮನೆ ಬಿಟ್ಟು ಹೋಗಿರುವ ಮೋಹಿತ್ ​ ಪತ್ತೆಗೆ ಪೊಲೀಸರು ಶೋಧ ನಡೆಸ್ತಿದ್ದಾರೆ. 

ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್

Related Video