ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ: ಈಶ್ವರಪ್ಪಗೆ ಬಿಸಿಪಾ ಟಾಂಗ್

- 17 ಮಂದಿ ಬಂದ ಮೇಲೆ ಗೊಂದಲ ಎಂಬ ಈಶ್ವರಪ್ಪ ಹೇಳಿಕೆಗೆ ಬಿಸಿ ಪಾಟೀಲ್ ಪ್ರತ್ಯುತ್ತರ - 'ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ'- 'ಭಿನ್ನಾಭಿಪ್ರಾಯಗಳನ್ನು ಅರುಣ್ ಜೀ ಸರಿಪಡಿಸುತ್ತಾರೆ'

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 16): ಬಿಜೆಪಿಗೆ 17 ಮಂದಿ ಬಂದ ಮೇಲೆ ಗೊಂದಲ ಎಂಬ ಈಶ್ವರಪ್ಪ ಹೇಳಿಕೆಗೆ ಬಿಸಿ ಪಾಟೀಲ್ ಪ್ರತ್ಯುತ್ತರ ಕೊಟ್ಟಿದ್ದಾರೆ.

ಗೊಂದಲದ ಹೇಳಿಕೆ: ಉಲ್ಟಾ ಹೊಡೆದ ಸಚಿವ ಕೆ ಎಸ್ ಈಶ್ವರಪ್ಪ

'ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ. ಮನೆಗೆ ಒಂದು ಸಲ ಸೊಸೆ ಬಂದ ಮೇಲೆ ಮೊಳೆ ಹೊಡೆದುಕೊಂಡು ಬಂದ ಹಾಗೆ' ಎಂದಿದ್ದಾರೆ. ಇನ್ನು ಅರುಣ್ ಸಿಂಗ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮನ್ನೆಲ್ಲಾ ಬರ ಹೇಳಿದ್ದಾರೆ. ಯಾವ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾರೋ ನೋಡಬೇಕು. ಭಿನ್ನಾಭಿಪ್ರಾಯಗಳು ಸಹಜ. ಅದನ್ನು ಅರುಣ್‌ ಜೀ ಸರಿಪಡಿಸುತ್ತಾರೆ' ಎಂದು ಬಿಸಿ ಪಾಟೀಲ್ ಹೇಳಿದ್ದಾರೆ. 

Related Video