Covid 19: ರಾಜ್ಯದಲ್ಲಿ ಕೊರೋನಾ ಆತಂಕ: ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ?
ಚೀನಾದಲ್ಲಿ ಕೊರೋನಾ ಮತ್ತೆ ಆರ್ಭಟ ಹೆಚ್ಚಾಗುತ್ತಿದ್ದಂತೆ, ಕರ್ನಾಟಕದಲ್ಲೂ ಆತಂಕ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಹಲವು ನಿರ್ಧಾರ ಜಾರಿಗೆ ತರಲು ನಿರ್ಧರಿಸಿದೆ.
ರಾಜ್ಯದಲ್ಲಿ ಕೊರೋನಾ ಆತಂಕ ಶುರುವಾಗಿದ್ದು, ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ಹಂತ ಹಂತವಾಗಿ ಟಫ್ ರೂಲ್ಸ್ ಜಾರಿಗೆ ಚಿಂತನೆ ಮಾಡಲಾಗುತ್ತಿದ್ದು, ಮಾರ್ಕೆಟ್, ಮಾಲ್, ಥಿಯೇಟರ್ ಹಾಗೂ ಪಾರ್ಕ್ ಸೇರಿದಂತೆ ಜನಸಂದಣಿಯ ಜಾಗಗಳಲ್ಲಿ ಮಾಸ್ಕ್ ಕಡ್ಡಾಯಕ್ಕೆ ಚಿಂತನೆ ನಡೆದಿದೆ. ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದ್ದು, ಕೊರೋನಾ ಕಟ್ಟಿಹಾಕಲು ಟಫ್ ರೂಲ್ಸ್ ಜಾರಿಯಾಗಲಿದೆ. ಹೊರ ದೇಶಗಳಿಂದ ನಗರಕ್ಕೆ ವಿದೇಶಿಗರು ಬರ್ತಾರೆ. ಬೆಂಗಳೂರುನಲ್ಲಿ ನಗರದಲ್ಲಿ ಸೋಂಕು ವ್ಯಾಪಿಸುವ ಭೀತಿ ಇದ್ದು, ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಬಗ್ಗೆಯು ಚಿಂತನೆ ನಡೆದಿದೆ.
Assembly election: ಜನಾರ್ಧನರೆಡ್ಡಿ ಹೊಸ ಪಕ್ಷದ ನಿರ್ಧಾರ ವಾಪಸ್ ಪಡ ...