'ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬೊಮ್ಮಾಯಿಯರೇ.?'

'ಕಾಂಗ್ರೆಸ್ ನಾಯಕರು ಬೆಂಜ್ ಕಾರಲ್ಲಿ ಓಡಾಡ್ತಾರೆ, ಚಕ್ಕಡಿ ಏರಿ ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಗೇಲಿ ಮಾಡಿದ್ದಾರೆ.  ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬೊಮ್ಮಾಯಿಯರೇ.?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ಧಾರೆ. 
 

First Published Oct 18, 2021, 4:05 PM IST | Last Updated Oct 18, 2021, 4:05 PM IST

ಬೆಂಗಳೂರು (ಅ. 18): ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವಿನ ವಾಕ್ಸಮರ ಜೋರಾಗಿದೆ. 

'ಇತ್ತೀಚಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚಕ್ಕಡಿ, ಸೈಕಲ್ ತೆಗೆದುಕೊಂಡು ವಿಧಾನಸೌಧಕ್ಕೆ ಬಂದಿದ್ದರು. ಸಿದ್ದರಾಮಯ್ಯ ಕೈಯಲ್ಲಿ ಹಗ್ಗ, ಡಿಕೆಶಿ ಕೈಯಲ್ಲಿ ಬಾರುಕೋಲು ಇತ್ತು. ಬೆಂಜ್ ಕಾರು ಗಿರಾಕಿಗಳು ಚಕ್ಕಡಿ ಮೇಲೆ ಬಂದು ಪ್ರತಿಭಟಿಸುತ್ತಾರೆ. ಇವರು ಜನರ ಉದ್ಧಾರ ಮಾಡಲು ಸಾಧ್ಯವೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ಧಾರೆ. 

ಇದಕ್ಕೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ಧಾರೆ. 'ಕಾಂಗ್ರೆಸ್ ನಾಯಕರು ಬೆಂಜ್ ಕಾರಲ್ಲಿ ಓಡಾಡ್ತಾರೆ, ಚಕ್ಕಡಿ ಏರಿ ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಗೇಲಿ ಮಾಡಿದ್ದಾರೆ.  ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬೊಮ್ಮಾಯಿಯರೇ.?' ಎಂದು ಪ್ರಶ್ನಿಸಿದ್ಧಾರೆ.