ರ‍್ಯಾಂಪ್ ವಾಕ್ ಮಾಡುವಾಗ ವಿದ್ಯಾರ್ಥಿನಿ ಸಾವು!, ಸ್ಟೇಜ್ ಮೇಲೆ ಕಾದಿದ್ದ ಯಮರಾಯ!
ರ‍್ಯಾಂಪ್ ವಾಕ್ ಮಾಡುತ್ತಿದ್ದಾಗಲೇ ವಿದ್ಯಾರ್ಥಿನಿ ದುರ್ಮರಣ| ಬೆಂಗಳೂರಿನ ಪೀಣ್ಯದ ಏಮ್ಸ್ ಕಾಲೇಜಿನಲ್ಲಿ ಹೃದಯ ವಿದ್ರಾವಕ ಘಟನೆ| ಎಂಬಿಎ ಓದುತ್ತಿದ್ದ 21 ವರ್ಷದ ಶಾಲಿನಿ ಹೃದಯಾಘಾತದಿಂದ ಸಾವು
ಬೆಂಗಳೂರು[ಅ.19]: ರ‍್ಯಾಂಪ್ ವಾಕ್ ಮಾಡುತ್ತಿದ್ದಾಗಲೇ ವಿದ್ಯಾರ್ಥಿನಿ ದುರ್ಮರಣಕ್ಕೀಡಾಗಿರುವ ವಿದ್ರಾವಕ ಘಟನೆ ಬೆಂಗಳೂರಿನ ಪೀಣ್ಯದ ಏಮ್ಸ್ ಕಾಲೇಜಿನಲ್ಲಿ ನಡೆದಿದೆ.
ಎಂಬಿಎ ಓದುತ್ತಿದ್ದ 21 ವರ್ಷದ ಶಾಲಿನಿ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿನಿ. ಏಮ್ಸ್ ಕಾಲೇಜಿನ ಫ್ರೆಶರ್ಸ್ ಡೇಗೆ ಪ್ರಾಕ್ಟೀಸ್ ಮಾಡುವ ವೇಳೆ ದುರ್ಘಟನೆ ಸಂಭವಿಸಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ರ‍್ಯಾಂಪ್ ವಾಕ್ ಪ್ರಾಕ್ಟೀಸ್ ಮಾಡುವ ವೇಳೆ ಶಾಲಿನಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದು, ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.