Asianet Suvarna News Asianet Suvarna News

Bahrainನಲ್ಲಿ ಮೊದಲ ಕನ್ನಡ ಭವನ ಉದ್ಘಾಟನೆ: ವಿದೇಶದಲ್ಲಿ ನಿರ್ಮಾಣವಾದ ಕನ್ನಡಿಗರ ಮೊದಲ ಸ್ವಂತ ಕಟ್ಟಡ

ಬಹರೇನ್‌ನಲ್ಲಿ ಕನ್ನಡಿಗರೇ ನಿರ್ಮಿಸಿದ ಮೊದಲ ಕನ್ನಡ ಭವನ ಉದ್ಘಾಟನೆಯಾಗಿದೆ. ವಿಡಿಯೋ ಸಂದೇಶದ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಈ ಕಟ್ಟಡವನ್ನು ಉದ್ಘಾಟನೆಯಾಗಿದೆ. 

ಮೊದಲ ಬಾರಿ ಹೊರದೇಶದಲ್ಲಿ ಕನ್ನಡಿಗರ ಕಟ್ಟಡವೊಂದು ನಿರ್ಮಾಣವಾಗಿದೆ. ಬಹರೇನ್‌ನಲ್ಲಿ ಮೊದಲ ಕನ್ನಡ ಭವನ ಉದ್ಘಾಟನೆಗೊಂಡಿದ್ದು, 12 ಕೋಟಿ ವೆಚ್ಚದಲ್ಲಿ ಕನ್ನಡ ಭವನ ತಲೆ ಎತ್ತಿದ್ದು, ಬಹರೇನ್‌ ಕನ್ನಡಿಗರೇ ಈ ಕನ್ನಡ ಭವನವನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಕನ್ನಡ ಭವನವನ್ನು ವಿಡಿಯೋ ಸಂದೇಶದ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ, ಕನ್ನಡ ಸಂಘದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕನ್ನಡ ಭವನದಲ್ಲಿ ಕನ್ನಡ ಕಲಿಕಾ ಕೇಂದ್ರ, ಯೋಗಾಭ್ಯಾಸಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ವಿದೇಶದಲ್ಲಿ ನಿರ್ಮಾಣವಾದ ಮೊದಲ ಸ್ವಂತ ಕನ್ನಡ ಭವನ ಇದಾಗಿದೆ. 

Video Top Stories