ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿ ಆದ್ರೆ ಓದು.. ಆದ್ರೆ ಆತ ಗೆದ್ದಿದ್ದು ಬರೋಬ್ಬರಿ 50 ಲಕ್ಷ!
ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಕ್ಕೆ ಖುಷಿಯಾಯ್ತು.
ಬಾಗಲಕೋಟೆ (ಜ.16): ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ ಬಾಗಲಕೋಟೆಯ ಯುವಕ. ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರಮಜಾನ್ ಅನ್ನೋ ಯುವಕ ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇಂದು ಬರೋಬ್ಬರಿ 50 ಲಕ್ಷ ಹಣ ಗೆದ್ದುಕೊಂಡಿದ್ದಾನೆ. ಬೆಳಗಾದ್ರೆ ಟೀ ಅಂಗಡಿಯಲ್ಲಿ ಕೆಲ್ಸ, ರಾತ್ರಿಯಾದ್ರೆ ಓದುತ್ತಿದ್ದ ಯುವಕ ಬಡತನದ ಮಧ್ಯೆ ಜೀವನ ಸಾಗಿಸುತ್ತಿದ್ದ. ಹೋದಲ್ಲಿ, ಬಂದಲ್ಲಿ ಅಮಿತಾ ಬಚನ್ ಅಂತ ಟಿಂಗಲ್ ಮಾಡಿದವರಿಗೆ ಇಂದು ಅದೇ ಅಮಿತಾ ಬಚನ್ ನಡೆಸಿಕೊಡುವ ಶೋನಲ್ಲಿ 50 ಲಕ್ಷ ಹಣ ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ರಮಜಾನ್.
ನಾನು ಎರಡ್ಮೂರು ಸಲ ಪ್ರಯತ್ನಿಸಿ ನಂತರ ಯಶಸ್ಸು ಕಂಡಿದ್ದೇನೆ. ಬಹಳ ಕಷ್ಟವೆನಿಸಿತ್ತು. ಅಡಿಯನ್ಸ್ ಬೆಂಬಲದಿಂದ ಎಲ್ಲ ಸಾಧ್ಯವಾಗಿದೆ. ಯಾರು ಶ್ರಮಪಡ್ತಾರೆ, ರಮಜಾನ್ ಆಗಿ ನನ್ನ ಮುಂದೆ ಕೂರುತ್ತಾರೆ ಎಂದು ಅಮಿತಾ ಬಚನ್ ಹೇಳಿದ್ದಕ್ಕೆ ಖುಷಿಯಾಯ್ತು. ಮನೆಯ ಆರ್ಥಿಕ ಸ್ಥಿತಿ ಬದಲಾವಣೆ ಮಾಡಬೇಕು ನನ್ನ ಹಾಗೂ ಸಹೋದರ ಸಹೋದರಿ ಓದಿಗೆ ಹಣ ಬಳಸಬೇಕು. ಜನ್ರ ಮಾತು ಕೇಳದೇ ಮುನ್ನುಗ್ಗಿ ಸಾಧಿಸಿ ಎಂದು ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ರಮಜಾನ್ ಮನವಿ ಮಾಡಿದ್ದಾನೆ.