ಆಜಾನ್ ವಿವಾದ: ಮುತಾಲಿಕ್‌ನಂಥವರನ್ನ ಒದ್ದು ಒಳಗೆ ಹಾಕ್ಬೇಕು: ಎಚ್‌ಡಿಕೆ ಆಕ್ರೋಶ

ಆಜಾನ್ VS ಸುಪ್ರಭಾತ ಅಭಿಯಾನ ವಿಚಾರವಾಗಿ ಮುತಾಲಿಕ್ ವಿರುದ್ಧ ಕಾಂಗ್ರೆಸ್ ಜೆಡಿಎಸ್ ವಾಗ್ದಾಳಿ ನಡೆಸಿದೆ.  
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 09): ಆಜಾನ್ VS ಸುಪ್ರಭಾತ ಅಭಿಯಾನ ವಿಚಾರವಾಗಿ ಮುತಾಲಿಕ್ ವಿರುದ್ಧ ಕಾಂಗ್ರೆಸ್ ಜೆಡಿಎಸ್ ವಾಗ್ದಾಳಿ ನಡೆಸಿದೆ.

'ಮುತಾಲಿಕ್‌ನಂಥವರನ್ನು ಒದ್ದು ಒಳಗೆ ಹಾಕಬೇಕು, ಇವರದ್ಧೇನು ರಾಮ ಸೇನೆಯೋ, ರಾವಣ ಸೇನೆಯೋ.? ಇಂತವರಿಂದಲೇ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಲು ಸಾಧ್ಯವಿಲ್ಲ. ಸರ್ಕಾರ ಇಂಥವ ವಿಚಾರಗಳಿಗೆ ಮೌನವಾಗಿ ಒಪ್ಪಿಗೆ ನೀಡುವುದನ್ನು ನಿಲ್ಲಿಸಬೇಕು. ಶಾಂತಿ ಕದಡಿದ ನಂತರ ರಿಪೇರಿ ಮಾಡೋಕೆ ಸಾಧ್ಯನಾ..? ಹನುಮಾನ್ ಚಾಲೀಸ್ ಪಠಿಸುವುದಾದರೆ ಪಠಿಸಲಿ, ಅದನ್ನು ಈ ಪರಿ ಪ್ರಚಾರ ಮಾಡ್ತಾ ಇರೋದ್ಯಾಕೆ..'? ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 

ಸುಪ್ರಭಾತ ಅಭಿಯಾನ ಮಾಡುವವರು ಭಯೋತ್ಪಾದಕರು: ಬಿಕೆ ಹರಿಪ್ರಸಾದ್

'ಸುಪ್ರಭಾತ ಅಭಿಯಾನ ಮಾಡುವವರು ಭಯೋತ್ಪಾದಕರು. ಅವರನ್ನು ಬಂಧಿಸಬೇಕಾಗುತ್ತೆ. ಇವರ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳೋಕೆ ಇಂತಹ ಕೆಲಸ ಮಾಡ್ತಾ ಇದ್ದಾರೆ. ಎಲ್ಲಿ ಶಾಂತಿ ಕದಡುವ ಕೆಲಸ ಆಗುತ್ತೋ ಅಂತವರನ್ನು ಬಂಧಿಸಬೇಕು' ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. 

Related Video