
ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಭಕ್ತರಿಗೆ ನೀಡಲಾಗುವುದಿಲ್ಲ: ಬಸವಲಿಂಗ ಶ್ರೀ ಮಾಹಿತಿ
ಶ್ರೀಗಳ ಚಿತಾಭಸ್ಮ ವಿಸರ್ಜನೆ ಬಗ್ಗೆ ಬಸವಲಿಂಗಶ್ರೀಗಳು ಮಾಹಿತಿ ನೀಡಿದ್ದು, ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡಲ್ಲ ಎಂದೂ ಹೇಳಿದ್ದಾರೆ.
ಜನವರಿ 2, ವೈಕುಂಠ ಏಕಾದಶಿಯಂದು ವಿಧಿವಶರಾದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಇನ್ನೆರಡು ದಿನಗಳೊಳಗೆ ವಿಸರ್ಜನೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಶ್ರೀಗಳ ಚಿತಾಭಸ್ಮ ವಿಸರ್ಜನೆ ಬಗ್ಗೆ ಬಸವಲಿಂಗಶ್ರೀಗಳು ಮಾಹಿತಿ ನೀಡಿದ್ದು, ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ, 1 ಸಾಗರ ಹಾಗೂ 4 ನದಿಗಳಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ವಿಸರ್ಜನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದೂ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ