ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ಆಮಿಷ: ವಿಜಯೇಂದ್ರ ಸ್ಪಷ್ಟನೆ

ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ ವರದಿ ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಟೀಕಿಸಿದ್ದಾರೆ. ವಕ್ಫ್ ಹಗರಣದಲ್ಲಿ ಕಾಂಗ್ರೆಸ್ ಮುಖಂಡರ ಭ್ರಷ್ಟಾಚಾರವನ್ನು ಮಾಣಿಪ್ಪಾಡಿ ವರದಿ ಉಲ್ಲೇಖಿಸಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕರು ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

Share this Video
  • FB
  • Linkdin
  • Whatsapp

ಅನ್ವರ್ ಮಾಣಿಪ್ಪಾಡಿ ವಿಚಾರದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಕಾಂಗ್ರೆಸ್‌ನವರು ಚರ್ಚೆ ಮಾಡಲಿ, ನಾವೂ ತಯಾರಿದ್ದೇವೆ. ಲಜ್ಜೆಗೆಟ್ಟ ಸರ್ಕಾರ ಇದು. ಪ್ರಿಯಾಂಕ್ ಖರ್ಗೆ ಹೇಳಿಕೆ ಗಮನಿಸಿದೆ. ಬುದ್ದಿ ಭ್ರಮಣೆ ಆದವರಂತೆ ವರ್ತಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅನ್ವರ್ ಮಾಣಿಪ್ಪಾಡಿ ವರದಿಯನ್ನ ನೀಡಿದ್ದಾರೆ. ವಕ್ಫ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಅವ್ಯವಹಾರ ಮಾಡಿರೋ ಬಗ್ಗೆ ಉಲ್ಲೇಖ ಮಾಡಿದ್ದಾರೆ. ವಿಜಯೇಂದ್ರ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನಾಗಿ, ನಾನ್ಯಾಕೆ ಅನ್ವರ್ ಮಾಣಿಪ್ಪಾಡಿ ಮನೆಗೆ ಹೋಗಬೇಕು? 150 ಕೋಟಿ ಆಫರ್ ಮಾಡಬೇಕು? ಅದು ಕಾಂಗ್ರೆಸ್ ಮುಖಂಡರನ್ನ ಬಚಾವ್ ಮಾಡೋದಕ್ಕೆ.? ಇದೇನಾದ್ರೂ ತರ್ಕ ಇದೆಯಾ.? ಇದನ್ನ ಮುಂದಿಟ್ಟುಕೊಂಡು ಸದನದ ಸಮಯವನ್ನ‌ ವ್ಯರ್ಥ ಮಾಡ್ತಾರೆ ಅಂದ್ರೆ, ಇದು ಮೂರ್ಖತನದ ಪರಮಾವಧಿ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ತಮ್ಮನ್ನ ತಾವು, ಹಗರಣದ ಸುಳಿಯಲ್ಲಿ ಸಿಲುಕಿಕೊಂಡಿರೋ ಸರ್ಕಾರದ ಭಾಗವಾಗಿದ್ದಾರೆ. ಸದನದ ಸಮಯವನ್ನ ವ್ಯರ್ಥ ಮಾಡ್ತಿದೆ. ಗೃಹ ಸಚಿವ ಪರಮೇಶ್ವರ್ ವೀಡಿಯೋ ದಾಖಲೆ ಆರೋಪ ವಿಚಾರದ ಬಗ್ಗೆ ಮಾತನಾಡಿ, ಅನ್ವರ್ ಮಾಣಿಪ್ಪಾಡಿ ಹಿಂದೆ ಏನು ಹೇಳಿದ್ದಾರೆ, ಈಗ ಏನು ಹೇಳಿದ್ದಾರೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ, ಕಾಂಗ್ರೆಸ್ ಪಕ್ಷದ ಮುಖಂಡರನ್ನ ಕಾಪಾಡಿ ಅಂತ‌ ಅವರ ಮನೆಗೆ ಹೋಗಬೇಕು.? ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಿದ್ದಾರಾ.? ಪ್ರಿಯಾಂಕಾ ಖರ್ಗೆ ಅವರು ಮಾತಾಡಿರೋದು ಕೂಡ ಅರ್ಥ ಹೀನ. ಅದನ್ಮ ಬಂಡವಾಳವಾಗಿಟ್ಟುಕೊಂಡು ಸಿಎಂ ಮಾತಾಡ್ತೀನಿ ಅಂದ್ರೆ ಏನು ಹೇಳಬೇಕು.? ಮುಖ್ಯಮಂತ್ರಿಗಳು ವಿಚಲಿತರಾಗಿದ್ದಾರೆ ಎಂದರು.
ಕೈ ನಾಯಕರು ಕಪೋಲ ಕಲ್ಪಿತ ಕಥೆ ಸೃಷ್ಟಿ ಮಾಡಿಕೊಂಡು, ವಿಪಕ್ಷದವರನ್ನ, ವಿಜಯೇಂದ್ರನನ್ನ ಹೆಣೆಯಬಹುದು ಅಂದುಕೊಂಡಿದ್ದಾರೆ. ಸದನದಲ್ಲಿ ಅವರ ಸವಾಲಿಗೆ ನಾವೂ ತೊಡೆ ತಟ್ಟುತ್ತೇವೆ. ಅವರ ಸವಾಲಿಗೆ, ನಾವೂ ಉತ್ತರ ಕೊಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.

Related Video