
ಮುಂದಿನ ವಿಧಾನಸಭಾ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ; ಶಾ ಹೇಳಿಕೆ ಹಿಂದಿನ ಲೆಕ್ಕಾಚಾರವಿದು!
- ಬೊಮ್ಮಾಯಿಗೆ ಶಾ ಮಣೆ: ಬಿಜೆಪಿಯಲ್ಲಿ ಸಂಚಲನ- ಯಡಿಯೂರಪ್ಪ ಬೆಂಬಲಿಗರ ಬೇಸರ?- ಸಾಮೂಹಿಕ ನಾಯಕತ್ವದ ಪರ ಮಾತು
ಬೆಂಗಳೂರು (ಸೆ. 04): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ಹಿರಿಯ ನಾಯಕರು ಹಿಂದೆ ಸರಿಸಲ್ಪಟ್ಟರೇ ಎಂಬ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಅಮಿತ್ ಶಾ ಹೇಳಿಕೆಗೆ ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಜ್ಯ ಬಿಜೆಪಿ ಸಂಚಲನ ಮೂಡಿಸಿದ ಶಾ: ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು ಹೀಗೆ
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಮಾತೂ ಪ್ರಸ್ತಾಪವಾಗಿದೆ. ಬಿಜೆಪಿ ನಾಯಕರೊಬ್ಬಬ್ಬರದು ಒಂದೊಂದು ಮಾತು. ಕೆಲವರು ಶಾ ಹೇಳಿಕೆಯನ್ನು ಸಮರ್ಥಿಸಿದರೆ, ಕೆಲವರು ಅಪಸ್ವರ ಎತ್ತಿದ್ದಾರೆ. ಹಾಗಾದರೆ ಅಮಿತ್ ಶಾ ಹೇಳಿಕೆ ಹಿಂದಿನ ಲೆಕ್ಕಾಚಾರವೇನು.?