ಮೀಸಲಾತಿ ಘೋಷಣೆಗೆ ಡೆಡ್‌ಲೈನ್, ಪಂಚಮಸಾಲಿ ಶ್ರೀಗಳ ಎಚ್ಚರಿಕೆಗೆ ಮಣಿಯುತ್ತಾರಾ ಬಿಎಸ್‌ವೈ.?

ರಾಜ್ಯದಲ್ಲಿ ಪಂಚಮಸಾಲಿಗಳ ಮೀಸಲಾತಿ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. 11 ದಿನ ನಿರಂತರವಾಗಿ ವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಪಂಚಮಸಾಲಿ ಶ್ರೀಗಳು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇಂದು ಪಂಚಮಸಾಲಿಗಳ ಪಾದಯಾತ್ರೆ ಬೆಂಗಳೂರಿಗೆ ಪ್ರವೇಶಿಸಲಿದೆ. 

First Published Feb 14, 2021, 10:47 AM IST | Last Updated Feb 14, 2021, 10:47 AM IST

ಬೆಂಗಳೂರು (ಫೆ. 14): ರಾಜ್ಯದಲ್ಲಿ ಪಂಚಮಸಾಲಿಗಳ ಮೀಸಲಾತಿ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. 11 ದಿನ ನಿರಂತರವಾಗಿ ವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಪಂಚಮಸಾಲಿ ಶ್ರೀಗಳು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇಂದು ಪಂಚಮಸಾಲಿಗಳ ಪಾದಯಾತ್ರೆ ಬೆಂಗಳೂರಿಗೆ ಪ್ರವೇಶಿಸಲಿದೆ. 

ಫೆ. 21 ರಂದು ಅರಮನೆ ಮೈದಾನದಲ್ಲಿ ಪಂಚಮಸಾಲಿಗಳ ಬೃಹತ್ ಸಮಾವೇಶ ನಡೆಯಲಿದೆ. ಫೆ. 22 ರಿಂದ ವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಮ ಮಾಡುವುದಾಗಿ ಶ್ರೀಗಳು ಎಚ್ಚರಿಸಿದ್ದಾರೆ. ಮಾರ್ಚ್ 4 ರೊಳಗೆ ಮೀಸಲಾತಿ ಘೋಷಿಸಲು ಗಡುವು ನೀಡಲಾಗಿದ್ದು, ಇಲ್ಲದಿದ್ರೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸ್ವಾಮೀಜಿಗಳು ನಿರ್ಧರಿಸಿದ್ದಾರೆ.