ರಾಜ್ಯ ಸರ್ಕಾರದಲ್ಲಿ ಮತ್ತೆ ಶಾಸಕ vs ಸಚಿವರ ಸಂಘರ್ಷ!

ದಾವಣಗೆರೆಯಲ್ಲಿ ವರ್ಗಾವಣೆ ವಿಚಾರದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್​ ಹಾಗೂ ಶಾಸಕ ಶಿವಗಂಗಾ ಬಸವರಾಜ್ ನಡುವೆ ಆಂತರಿಕ ಕಿತ್ತಾಟ ತಾರಕಕ್ಕೇರಿದೆ. FDA ವರ್ಗಾವಣೆಯಲ್ಲಿ ಸಚಿವರ ಹೊಂದಾಣಿಕೆ ಆರೋಪದ ಮೇರೆಗೆ ಸಿಎಂಗೆ ಶಾಸಕರು ಪತ್ರ ಬರೆದಿದ್ದಾರೆ.

First Published Dec 19, 2024, 8:36 PM IST | Last Updated Dec 19, 2024, 9:05 PM IST

ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಮೇಲೆ ಸರ್ಕಾರ ನಡೆಯುತ್ತಿದ್ದರೂ ಎಲ್ಲವೂ ಸರಿಯಾಗಿಲ್ಲ. ಒಂದೆಡೆ ಅನುದಾನ ವಿಚಾರ, ಮುಡಾ ವಿಚಾರ, ಸಿಎಂ ಕುರ್ಚಿ ವಿಚಾರದ ಕಿತ್ತಾಟದ ನಡುವೆಯೇ ಇದೀಗ ಮತ್ತೊಮ್ಮೆ ಶಾಸಕರು ಹಾಗೂ ಸಚಿವರ ನಡುವಿನ ಕಿತ್ತಾಟ ಹೊರಗೆ ಬಂದಿದೆ. ದಾವಣಗೆರೆಯಲ್ಲಿ ವರ್ಗಾವಣೆ ವಿಚಾರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್​ ಹಾಗೂ ಶಾಸಕ ಶಿವಗಂಗಾ ಬಸವರಾಜ್ ನಡುವೆ ಆಂತರಿಕ ಕಿತ್ತಾಟ ಶುರುವಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಶಾಸಕ ಶಿವಗಂಗಾ ಪತ್ರ ಬರೆದಿದ್ದಾರೆ.

ದಾವಣಗೆರೆಯಲ್ಲಿ ಲೋಕೋಪಯೋಗಿ ಇಲಾಖೆ FDA ವರ್ಗಾವಣೆ ವಿಚಾರದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೊಂದಾಣಿಕೆ ಮಾಡಿಕೊಂಡಿದ್ದಾರೆ. FDA ಐ.ಎಸ್.ಓಡೆನಪುರ್ ವರ್ಗಾವಣೆಯಲ್ಲಿ ಸಚಿವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಓಡೆನಪುರ್​ ಜಾಗಕ್ಕೆ ವಿಜಯ್​ ಕುಮಾರ್​ ಎಂಬ ವ್ಯಕ್ತಿ ವರ್ಗಾವಣೆ ಆಗಿದ್ದರು. ಈ ನಿಯಮದಂತೆ ಚಲಾನಾದೇಶ ಪಡೆದಿರುವ ಓಡೆನಪುರ್​ ಅವರು, ಕರ್ತವ್ಯದಿಂದ ಬಿಡುಗಡೆ ಆಗುವ ವೇಳೆ ತೀವ್ರ ಒತ್ತಡ ಹೇರಿ ಸದರಿ ಆದೇಶ ಕಾಯ್ದಿರಿಸುವಂತೆ ಮಾಡಿದ್ದಾರೆ. ಇನ್ನು ಕರ್ತವ್ಯದಿಂದ ವಿಜಯ್​ ಕುಮಾರ್​ ಬಿಡುಗಡೆಗೊಳಿಸದಂತೆ ಆದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಕಳಿಸಿದ್ದಾರೆ.

ಇದನ್ನೂ ಓದಿ: ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ. ರವಿ ಅರೆಸ್ಟ್ ಮಾಡಿ, ಎತ್ಹಾಕೊಂಡು ಹೋದ ಪೊಲೀಸರು!

ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅವರು, ಒಂದೆಡೆ ಪತ್ರ ನೀಡುವುದು, ಇನ್ನೊಂದೆಡೆ ಪತ್ರಕ್ಕೆ ತಡೆ ನೀಡುವುದರ ಬಗ್ಗೆ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ದಾವಣಗೆರೆಯಿಂದ ವರ್ಗಾಯಿಸಲ್ಪಟ್ಟ ಓಡೆನಪುರ್​ ಇದೀಗ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಹೆಚ್ಚು ಹಣ ಖರ್ಚು ಮಾಡಿ ಜಿಲ್ಲಾಧ್ಯಕ್ಷ ಆಗಿದ್ದು, ಸ್ಥಳೀಯ ಕಾಂಗ್ರೆಸ್ ಶಾಸಕರ ಬೆಂಬಲಿತ ಅಭ್ಯರ್ಥಿಗೆ ಸೋಲು ಉಂಟಾಗಿದೆ. ಹೀಗಾಗಿ, ಅಧಿಕಾರಿ ಓಡೆನಪುರ್​ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ. ಇಷ್ಟಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದವರ ಜತೆ ಜಿಲ್ಲಾ ಉಸ್ತುವಾರಿ ಸಚಿವರು ಸಾಥ್ ನೀಡುತ್ತಿದ್ದಾರೆ ಎಂದು ಶಾಸಕ ಶಿವಗಂಗಾ ಬಸವರಾಜ್ ಆರೋಪ ಮಾಡಿದ್ದಾರೆ.

Video Top Stories