ಆರೋಪಿ ನಟ ದರ್ಶನ್ ಜೈಲಿನ ನಡಿಗೆ ಅಸಭ್ಯ ನಡೆಗೆ ದಿಕ್ಕು ತಪ್ಪಿ ಹೋತ?

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಅಸಭ್ಯ ನಡೆ ಪ್ರದರ್ಶನ, ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಘ್ನ, ಕೋಮುಸಂಘರ್ಷಕ್ಕೆ ಹೊತ್ತಿ ಉರಿದ ಸಂಪೂರ್ಣ ಊರು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ವಿಡಿಯೋ ನ್ಯೂಸ್ ಹವರ್ ಇಲ್ಲಿದೆ.

First Published Sep 12, 2024, 11:03 PM IST | Last Updated Sep 12, 2024, 11:03 PM IST

ಬಳ್ಳಾರಿ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ.ಸಂದರ್ಶಕರ ಕೊಠಡಿಗೆ ಬರವು ವೇಳೆ ದರ್ಶನ್ ಮಾಧ್ಯಮ ವಿರುದ್ಧ ಅಸಭ್ಯ ನಡೆ ಪ್ರದರ್ಶಿಸಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದೆ. ಬಳ್ಳಾರಿ ಜೈಲಿಗೆ ಇಂದು ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ ಹಾಗೂ ವಕೀಲರು ಭೇಟಿ ನೀಡಿದ್ದರು. ಈ ವೇಳೆ ಜಾಮೀನು ಕುರಿತು ದರ್ಶನ್ ಚರ್ಚೆ ನಡೆಸಿದ್ದಾರೆ. ಆದರೆ ಮಾಧ್ಯಮದಲ್ಲಿ ಬರುತ್ತಿರುವ ಕೊಲೆ ಪ್ರಕರಣದ ಸುದ್ದಿಯಿಂದ ದರ್ಶನ್ ಆಕ್ರೋಶ ಹೆಚ್ಚಾದಂತೆ ಕಾಣುತ್ತಿದೆ. 

Video Top Stories