ದೈವಾರಾಧನೆ ಬಿಸ್ನೆಸ್: ಅಪಚಾರ, ಅವಹೇಳನ ವಿರುದ್ಧ ಹೋರಾಡಲು ಹೊಸ ಸಂಘಟನೆ ಅಸ್ತಿತ್ವಕ್ಕೆ!
ದೈವಾರಾಧನೆಯ ಅಪಹಾಸ್ಯದ ವಿರುದ್ಧ ಹೋರಾಟಕ್ಕೆ ನಡೆಸಲು ದೈವಾರಾಧಾಕರು ಮುಂದಾಗಿದ್ದಾರೆ. ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಇದರ ಕುರಿತು ಸಭೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ, ವೇದಿಕೆಗಳಲ್ಲಿ, ಟ್ಯಾಬ್ಲೋ ಗಳಲ್ಲಿ ದೈವಾರಾಧನೆಯ ಅಪಹಾಸ್ಯ ಪ್ರದರ್ಶನ ನಡೆಯುತ್ತಿದೆ.
ಮಂಗಳೂರು (ಡಿ.14): ದೈವಾರಾಧನೆಯ ಅಪಹಾಸ್ಯದ ವಿರುದ್ಧ ಹೋರಾಟಕ್ಕೆ ನಡೆಸಲು ದೈವಾರಾಧಾಕರು ಮುಂದಾಗಿದ್ದಾರೆ. ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಇದರ ಕುರಿತು ಸಭೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ, ವೇದಿಕೆಗಳಲ್ಲಿ, ಟ್ಯಾಬ್ಲೋ ಗಳಲ್ಲಿ ದೈವಾರಾಧನೆಯ ಅಪಹಾಸ್ಯ ಪ್ರದರ್ಶನ ನಡೆಯುತ್ತಿದೆ. ದ. ಕ ಉಡುಪಿಗೆ ಮಾತ್ರ ಸೀಮಿತವಾಗಿದ್ದ ಸಂಸ್ಕೃತಿ ಇದೀಗ ಪ್ರದೇಶಗಳನ್ನ ಹೊರತುಪಡಿಸಿ ಕಂಡ ಕಂಡಲ್ಲಿ ಪ್ರದರ್ಶನ ಕಾಣುತ್ತಿದೆ. ಮತ್ತೆ ಎಲ್ಲೆ ಮೀರಿ ನಡೆಯುತ್ತಿರುವ ಘಟನಾವಳಿಗಳ ವಿರುದ್ಧ ದೈವಾರಾಧಕರು ಗರಂ ಆಗಿದ್ದಾರೆ. ಇದರ ವಿರುದ್ಧ ಹೋರಾಟಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಸಜ್ಜಾಗಿದೆ. ತುಳುನಾಡಿನ ವಿದ್ವಾಂಸರನ್ನ ಒಳಗೊಂಡು ಮುಂದಕ್ಕೆ ವ್ಯವಸ್ಥಿತ ಹೋರಾಟದ ಕುರಿತು ಚರ್ಚೆ ನಡೆಸಿದ್ದಾರೆ. ಯಾವ ಸ್ಥಳದಲ್ಲಿ ದೈವಗಳಿಗೆ ಅಪಮಾನವಾಗುತ್ತೆ ಅಲ್ಲಿ ನಮ್ಮ ಹೋರಾಟ ಮಾಡುತ್ತೆವೆ.ದೈವದ ಹೆಸರಲ್ಲಿ ನಡೆಯುವ ರೀಲ್ಸ್, ನಾಟಕ, ಸಿನೆಮಾಗಳನ್ನ ತಡೆಯಲು ಹೋರಾಟದ ಅವಶ್ಯಕತೆಯಿದೆ. ಕೆಲವೇ ದಿನಗಳಲ್ಲಿ ಎಲ್ಲಾ ದೈವಾರಾಧಕಾರನ್ನೊಳಗೊಂಡು ದೊಡ್ಡ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.