ಇಂದಿನಿಂದ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಆರಂಭ

ಕೇಂದ್ರ ಸರ್ಕಾರದ ಯೋಜನಗಳ ಜನಜಾಗೃತಿಗಾಗಿ ರಾಜ್ಯದಲ್ಲಿ ಆ.16ರಿಂದ 4 ದಿನಗಳ ಕಾಲ ನೂತನ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ನಡೆಯಲಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 16): ಕೇಂದ್ರ ಸರ್ಕಾರದ ಯೋಜನಗಳ ಜನಜಾಗೃತಿಗಾಗಿ ರಾಜ್ಯದಲ್ಲಿ ಆ.16ರಿಂದ 4 ದಿನಗಳ ಕಾಲ ನೂತನ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ನಡೆಯಲಿದೆ. 

ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ ಚಂದ್ರಶೇಖರ ನೇತೃತ್ವದ ತಂಡ ಆ. 16ರಂದು ಹುಬ್ಬಳ್ಳಿ, 17ರಂದು ಕೊಡಗು, ದಕ್ಷಿಣ ಕನ್ನಡ, 18ರಂದು ಶಿವಮೊಗ್ಗ, ಉತ್ತರ ಕನ್ನಡ ಹಾಗೂ 19ಕ್ಕೆ ಬೆಂಗಳೂರು ನಗರಕ್ಕೆ ಭೇಟಿ ನೀಡಲಿದೆ. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ನೇತೃತ್ವದ ತಂಡ 17ರಂದು ಬೆಂಗಳೂರು ಗ್ರಾಮೀಣ, ತುಮಕೂರು, 18ಕ್ಕೆ ಚಿತ್ರದುರ್ಗ, ದಾವಣಗೆರೆ, 19ಕ್ಕೆ ಹಾವೇರಿ, ಗದಗಗಳಲ್ಲಿ ಸಂಚರಿಸಲಿದೆ. ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರದ್ಲಾಂಜೆ ನೇತೃತ್ವದ ತಂಡ 17ಕ್ಕೆ ಮಂಡ್ಯ, ಚಾಮರಾಜನಗರ, 18ಕ್ಕೆ ಮೈಸೂರು, ಹಾಸನ, 20ಕ್ಕೆ ಉಡುಪಿಗೆ ಭೇಟಿ ನೀಡಲಿದೆ. 

Related Video