Asianet Suvarna News Asianet Suvarna News

ಪಂಚಮಸಾಲಿಗೆ 2ಎ ಮೀಸಲಾತಿ: ಬಿಜೆಪಿಗೆ ಮತ್ತೆ ವಾರ್ನಿಂಗ್ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ

ಚುನಾವಣಾ ನೀತಿ ಸಂಹಿತೆ ಬಂದು ಮೀಸಲಾತಿಯನ್ನ ಅನುಷ್ಠಾನ ಮಾಡದೆ ಹೋದಲ್ಲಿ, ನಾನು ಕರ್ನಾಟಕದ ಎಲ್ಲಾ 224 ಕ್ಷೇತ್ರಕ್ಕೆ ಹೋಗುತ್ತೇನೆ. ನಮ್ಮ ಬೆಂಬಲಕ್ಕೆ ಯಾರು ನಿಂತಿದಾರೆ ಇಲ್ಲಾ ಅನ್ನೋದನ್ನ ಜನರಿಗೆ ಹೇಳುತ್ತೇನೆ.

ಬೆಂಗಳೂರು (ಜ.26): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಬಂದು ಮೀಸಲಾತಿಯನ್ನ ಅನುಷ್ಠಾನ ಮಾಡದೆ ಹೋದಲ್ಲಿ, ನಾನು ಕರ್ನಾಟಕದ ಎಲ್ಲಾ 224 ಕ್ಷೇತ್ರಕ್ಕೆ ಹೋಗುತ್ತೇನೆ. ನಮ್ಮ ಬೆಂಬಲಕ್ಕೆ ಯಾರು ನಿಂತಿದಾರೆ ಇಲ್ಲಾ ಅನ್ನೋದನ್ನ ಜನರಿಗೆ ಹೇಳುತ್ತೇನೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ವಾರ್ನಿಂಗ್‌ ನೀಡಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು.ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮಾಡುತ್ತಿರುವ ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ರಾಜ್ಯ ಸರ್ಕಾರ 2ಎ ಮೀಸಲಾತಿ ಕೊಡುವಲ್ಲಿ ವಿಳಂಬ ಧೋರಣೆ ಮಾಡುತ್ತಿದೆ. ಪ್ರಧಾನ ಮಂತ್ರಿಯವರ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದೇನೆ. ಅವರು ನಮ್ಮ ಪತ್ರಕ್ಕೆ ಸ್ಪಂದಿಸುತ್ತಾರೆ. ಅವರ ಹೇಳಿಕೆಗೆ ಕಾಯುತ್ತೇನೆ ಎಂದರು. 

6ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಧರಣಿ: ರಾಜ್ಯ ಸರ್ಕಾರದ ವಿರುದ್ಧ ಮೋದಿಯವರಿಗೆ ಪತ್ರದ ಮೂಲಕ ದೂರು

ಜನತಾ ನ್ಯಾಯಾಲಯಕ್ಕೆ ತೀರ್ಮಾನ: ಯಾವುದೇ ಜಾತಿ ಧರ್ಮ ಇದ್ರೂ ಕೂಡ ಜನರಿಗೆ ಈ ವಿಷಯದ ಬಗ್ಗೆ ಚರ್ಚೆ ಮಾಡುತ್ತೇನೆ. ಅವಾಗ ಯಾರಿಗೆ ವೋಟ್ ಮಾಡ್ಬೇಕು ಬೇಡಾ ಅನ್ನೋದನ್ನ ಜನರು ನಿರ್ಧಾರಿಸುತ್ತಾರೆ. ಜನ ಬೆಂಬಲ ಕೊಡ್ತಾರಾ ಅಥವಾ ಹತ್ತಿಕ್ಕೋ ಪ್ರಯತ್ನ ಮಾಡ್ತಾರೆ ಅನ್ನೋದನ್ನ ಜನತಾ ನ್ಯಾಯಾಲಯಕ್ಕೆ ತೀರ್ಮಾನ ತೆಗೆದುಕೊಳ್ಳಲು ಬಿಡುತ್ತೇನೆ. ಯಾವುದೇ ಪಕ್ಷ ಇರ್ಲಿ ಯಾವುದೇ ಜಾತಿ ಇರ್ಲಿ, 3 ಪಕ್ಷದಲ್ಲಿ ಇರೋ ಶಾಸಕರು ನನಗೆ ಬೆಂಬಲ ನೀಡಿದ್ದಾರೆ. ಮತ್ತು ಯಾರು ವಿರೋಧ ಮಾಡಿದ್ದಾರೆ ಅಂತಾ ರಾಜ್ಯದ ಮೂಲೆ ಮೂಲೆಗೂ ಹೇಳಿ ಬರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಪಂಚಮಸಾಲಿಗಳ ವೋಟು ಕೈ ಬಿಡುತ್ತೆ: ಜನರಿಗೆ ಮೀಸಲಾತಿ ವಿಚಾರವಾಗಿ ಮಾಡಿರುವ ಕಾರ್ಯದ ಬಗ್ಗೆ ಓಪನ್ ಆಗಿ ಹೇಳಿದರೆ ಪಂಚಮಸಾಲಿಗಳ ವೋಟು ಕೈ ಬಿಡುತ್ತೆ ಅಂತಾ, ತೆರೆಯ ಮುಂದೆ ಬಾರದೆ ಮರೆಯಲ್ಲಿ ಓಡಾಡುತ್ತಿದ್ದಾರೆ. ಈ ಹೋರಾಟವನ್ನ ಕೆಡಿಸೋ ಷಡ್ಯಂತ್ರ ಮಾಡುತ್ತಿದ್ದಾರೆ. ಅಂತವರು ಯಾರು ಅಂತಾ ಇಡೀ ಜಗತ್ತಿಗೆ ಗೊತ್ತಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಪ್ರಧಾನಿ ಮೋದಿ 100% ಸತ್ಯ ನಮ್ಮ ಹೋರಾಟಕ್ಕೆ ನ್ಯಾಯ ಕೊಡೋಕೆ ಮುಂದೆ ಬರ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ತುಂಬಾ ಗಟ್ಟಿಯಾಗಿ ನಮ್ಮ ಜೊತೆಗಿದ್ದಾರೆ ಎಂದು ತಿಳಿಸಿದ್ದಾರೆ.

Uttara Kannada: ಹಾಲಕ್ಕಿ ಸಮುದಾಯದ ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ನೋಟಾ ಹಾಕುವುದಾಗಿ ಎಚ್ಚರಿಕೆ!

Video Top Stories