ರಾಜ್ಯದಲ್ಲಿ ಕಳೆದ 6 ದಿನದಲ್ಲಿ 15 ಮಕ್ಕಳಿಗೆ ತಗುಲಿದೆ ಕೊರೋನಾ ಸೋಂಕು..!

ಮಕ್ಕಳಿರುವ ಪೋಷಕರು ಈ ಸುದ್ದಿಯನ್ನು ನೋಡಲೇಬೇಕು. ಹಿರಿಯ ನಾಗರಿಕರನ್ನು ನೋಡಿಕೊಂಡಷ್ಟೇ ಸೂಕ್ಷ್ಮವಾಗಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಬೇಕು. ಕೊರೋನಾ ವೈರಸ್ ರಾಜ್ಯದಲ್ಲಿ ಮಕ್ಕಳ ಮೇಲೆ ವಕ್ರದೃಷ್ಠಿ ಬೀರಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
First Published Apr 15, 2020, 12:17 PM IST | Last Updated Apr 15, 2020, 12:17 PM IST

ಬೆಂಗಳೂರು(ಏ.15): ಕೊರೋನಾ ವೈರಸ್ ಹಿರಿಯರ ಮೇಲಷ್ಟೇ ಪ್ರಭಾವ ಬೀರುತ್ತಿಲ್ಲ, ಬದಲಾಗಿ ಚಿಕ್ಕ ಮಕ್ಕಳ ಮೇಲೂ ಸೋಂಕು ತಗುಲುತ್ತಿದ್ದು ಕಳೆದ 6 ದಿನಗಳಲ್ಲಿ ರಾಜ್ಯದಲ್ಲಿ 15 ಮಕ್ಕಳಿಗೆ ಸೋಂಕು ತಗುಲಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

'ಡ್ಯೂಟಿ ಮುಗಿಸಿ ಮನೆಗೆ ಹೋಗೋಕೂ ಭಯ, ಪುಟ್ಟ ಕಂದನಿದ್ದಾನೆ'..!

ಕರ್ನಾಟಕದಲ್ಲಿ ಇದುವರೆಗೂ 260 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ 15 ಮಕ್ಕಳಿಗೆ ಕೋವಿಡ್ 19 ಸೋಂಕು ತಗುಲಿದೆ. ದಕ್ಷಿಣ ಕನ್ನಡದ 10 ತಿಂಗಳ ಮಗುವಿಗೆ ಕೊರೀನಾ ಸೋಂಕು ತಗುಲಿತ್ತು. ಆದರೆ ಮಗು ಪವಾಡಸದೃಸ ರೀತಿಯಲ್ಲಿ ಸೋಂಕಿನಿಂದ ಪಾರಾಗಿತ್ತು. 

10 ತಿಂಗಳ ಕೊರೋನಾ ಸೋಂಕಿತ ಮಗು ರಕ್ಷಿಸಿದ ವಾರಿಯರ್ಸ್ ಹೇಳಿದ್ದಿಷ್ಟು..!

ಏಪ್ರಿಲ್ ಮೊದಲ ವಾರದಲ್ಲಿ ಯಾವ ಮಗುವಿಗೂ ಕೊರೋನಾ ಸೋಂಕು ತಗುಲಿರಲಿಲ್ಲ, ಆದರೀಗ ಏಪ್ರಿಲ್ 09ರಿಂದ ಏಪ್ರಿಲ್ 14ರೊಳಗಾಗಿ ಬರೋಬ್ಬರಿ 15 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಮಕ್ಕಳಿರುವ ಪೋಷಕರ ಆತಂಕ ಹೆಚ್ಚುವಂತೆ ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.