Asianet Suvarna News Asianet Suvarna News

Recruitment Scam ಪದೇ ಪದೇ ಅರ್ಜಿ ರಿಜೆಕ್ಟ್ ಆಗಿದ್ದಕ್ಕೆ ರೋಸಿ ಹೋಗಿದ್ದೆ: ಆರೋಪಿ ಸೌಮ್ಯ!

ಸರ್ಕಾರಿ ಪದವಿ ಕಾಲೇಜು  ಪ್ರಾಧ್ಯಾಪಕರ ನೇಮಕಾತಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪದೇ ಪದೇ ಪರೀಕ್ಷೆ ಅರ್ಜಿ ರಿಜೆಕ್ಟ್ ಆಗಿದ್ದಕ್ಕೆ ರೋಸಿ ಹೋಗಿದ್ದೆ ಎಂದಿದ್ದಾರೆ.

ಬೆಂಗಳೂರು(ಎ.28): ಸರ್ಕಾರಿ ಪದವಿ ಕಾಲೇಜು  ಪ್ರಾಧ್ಯಾಪಕರ ನೇಮಕಾತಿಗೆ (Professor Recruitment) ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆ(Competitive Examination) ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಬಂಧಿತರಾಗಿರುವ ಸೌಮ್ಯ ರೋಚಕ ಕಥೆ ಹೇಳಿದ್ದು, ಪದೇ ಪದೇ ಪರೀಕ್ಷೆ ಅರ್ಜಿ ರಿಜೆಕ್ಟ್ ಆಗಿದ್ದಕ್ಕೆ ರೋಸಿ ಹೋಗಿದ್ದೆ. ಮೊದಲನೇ ಬಾರಿ ಜನ್ಮ ದಿನಾಂಕ ಸರಿ ಇಲ್ಲದ್ದಕ್ಕೆ ಅರ್ಜಿ ರಿಜೆಕ್ಟ್ ಆಗಿತ್ತು.  ಎರಡನೇ ಬಾರಿ ಆದಾಯ ದೃಢೀಕರಣ ಪತ್ರದಲ್ಲಿ ಲೋಪ ಹಿನ್ನೆಲೆ ರಿಜೆಕ್ಟ್ ಆಗಿತ್ತು.  ಮೂರನೇ ಬಾರಿ ಸಹಾಯಕ  ಉಪನ್ಯಾಸಕ ಹುದ್ದೆ ಅರ್ಜಿ ಅಪ್ರೂವ್ ಆಗಿತ್ತು.  ಹೀಗಾಗಿ ಹೇಗಾದರೂ ಹುದ್ದೆ ಗಿಟ್ಟಿಸಿಕೊಳ್ಳಲು ಹಠಕ್ಕೆ ಬಿದ್ದದ್ದ ಸೌಮ್ಯ ಗುರುಗಳಿಗೆ ಮೋಸ ಮಾಡಿ ಪ್ರಶ್ನೆ ಪತ್ರಿಕೆ ಎತ್ತಿದ್ದರು. ಈ ಎಲ್ಲಾ ವಿಚಾರಗಳನ್ನು ತನಿಖಾಧಿಕಾರಿಗಳ ಮುಂದೆ ಸೌಮ್ಯ ಬಾಯಿ ಬಿಟ್ಟಿದ್ದಾರೆ. ಸೌಮ್ಯ ನೀಡಿರುವ ಈ ಹೇಳಿಕೆಯನ್ನು   ಅಧಿಕಾರಿಗಳು ಕೋರ್ಟ್ ಗೆ ಸಲ್ಲಿಸಿದ್ದಾರೆ.

KEA EXAM PAPER LEAK ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ

ಇನ್ನು ಒಂದೊಂದು ಹುದ್ದೆಗೆ ಕನಿಷ್ಠ 40 ರಿಂದ 50 ಲಕ್ಷ ರು. ಇನ್ನು ಕೆಲವೊಂದು ಪ್ರಮುಖ ವಿಭಾಗದ ಹುದ್ದೆಗಳಿಗೆ ಗರಿಷ್ಠ 80 ಲಕ್ಷ ರು. ವರೆಗೆ ಮಧ್ಯವರ್ತಿಗಳ ಮೂಲಕ ವ್ಯಾಪಾರ ಕುದುರಿಸಲಾಗಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

Video Top Stories