Asianet Suvarna News Asianet Suvarna News

ಟೀಂ ಇಂಡಿಯಾ ಕೋಚ್ ರೇಸ್‌ನಲ್ಲಿರುವ 6 ಮಂದಿಯ ಕಿರುಪರಿಚಯ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಪ್ರಮುಖ 6 ಮಂದಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ ನೋಡಿ..

  1. ರವಿ ಶಾಸ್ತ್ರಿ: ಇವರು ಭಾರತದ ಕೋಚ್ ಆಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವಕಪ್ ಸೆಮಿಫೈನಲ್’ನಲ್ಲಿ ಭಾರತ ಸೋಲಿನ ಬಳಿಕ ವ್ಯಾಪಕ ಟೀಕೆಗಳನ್ನು ಎದುರಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡ ಶಾಸ್ತ್ರಿ ಪರವಾಗಿದೆ.
  2. ಫಿಲ್ ಸಿಮೋನ್ಸ್: ಐರ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡ ಪರ ಕೋಚ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರ ಜತೆ ಕೆಲಕಾಲ ವೆಸ್ಟ್ ಇಂಡೀಸ್ ತಂಡಕ್ಕೂ ಮಾರ್ಗದರ್ಶನ ಮಾಡಿದ್ದು, 2016ರ ವಿಶ್ವ ಟಿ20 ಟೂರ್ನಮೆಂಟ್ ಗೆಲುವಿನ ತಂಡಕ್ಕೆ ಮಾರ್ಗದರ್ಶನ ನೀಡಿದ ಕೀರ್ತಿ ಇವರದ್ದಾಗಿದೆ.
  3. ರಾಬಿನ್ ಸಿಂಗ್: ರಾಬಿನ್ ಸಿಂಗ್ ಭಾರತ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆದಾಗ ರಾಬಿನ್ ಸಿಂಗ್ ಫೀಲ್ಡಿಂಗ್ ಕೋಚ್ ಆಗಿದ್ದರು.
  4. ಲಾಲ್ ಚಂದ್ ರಜಪೂತ್: ಲಾಲ್ ಚಂದ್ ರಜಪೂತ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸಿತ್ತು. ಇವರು ಆಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ತಂಡಕ್ಕೂ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
  5. ಮೈಕ್ ಹೆಸನ್: ನ್ಯೂಜಿಲೆಂಡ್ ಪರ 6 ವರ್ಷಗಳ ಕಾಲ ನ್ಯೂಜಿಲೆಂಡ್ ಪರ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಹೆಸನ್ ಮಾರ್ಗದರ್ಶನದಲ್ಲಿ ನ್ಯೂಜಿಲೆಂಡ್ ಮೊದಲ ಬಾರಿಗೆ 2015ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. 
  6. ಟಾಮ್ ಮೂಡಿ: ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಫೈನಲ್ ಪ್ರವೇಶಿಸುವಲ್ಲಿ ಮೂಡಿ ಮಾರ್ಗದರ್ಶನ ಮರೆಯುವಂತಿಲ್ಲ. 

Video Top Stories