ರೋಜರ್ ಫೆಡರರ್ ಬಗೆಗೆ ನಿಮಗೆ ಗೊತ್ತಿರದ 5 ಸಂಗತಿಗಳಿವು
ಟೆನಿಸ್ ದಿಗ್ಗಜ ರೋಜರ್ ಫೆಡರರ್ 08/08ರಂದು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್. ಕಾಂ ರೋಜರ್ ಫೆಡರರ್ ಬಗೆಗಿನ 5 ಕುತೂಹಲಕಾರಿ ಅಂಶಗಳನ್ನು ಮುಂದಿಡುತ್ತಿದೆ.
- ರೋಜರ್ ಫೆಡರರ್ 14 ವರ್ಷದವರೆಗೂ ಶುದ್ಧ ಸಸ್ಯಹಾರಿಯಾಗಿದ್ದರು. ಆ ಬಳಿಕ ಮಾಂಸಹಾರದತ್ತ ಒಲವು ತೋರಿಸಿದರು. ಈಗಂತೂ ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲವನ್ನು ತಿನ್ನುತ್ತಾರೆ.
- ರೋಜರ್ ಫೆಡರರ್ ಎರಡು ಜತೆ ಅವಳಿ ಮಕ್ಕಳ ತಂದೆ. 2009ರಲ್ಲಿ ಫೆಡರರ್ ಮಾಜಿ ಟೆನಿಸ್ ಆಟಗಾರ್ತಿ ಮಿರ್ಕಾ ವಾವ್ರಿನೆಕ್ ಅವರನ್ನು ವಿವಾಹವಾಗಿದ್ದರು. ಫೆಡರರ್ 2 ಅವಳಿ ಹೆಣ್ಣು ಮಕ್ಕಳಾದ ಮೈಲಾ ರೋಸ್ ಮತ್ತು ಚಾರ್ಲ್ನೆ ಹಾಗೂ 2 ಅವಳಿ ಗಂಡು ಮಕ್ಕಳಾದ ಲಿಯೋ ಮತ್ತು ಲೆನಾರ್ಟ್ ತಂದೆಯಾಗಿದ್ದಾರೆ.
- 2007ರಲ್ಲಿ ಸ್ವಿಸ್ ಸ್ಟ್ಯಾಂಪ್ ಸೇರಿದ ಸ್ವಿಟ್ಜರ್’ಲ್ಯಾಂಡ್’ನ ಮೊದಲ ಜೀವಂತ ವ್ಯಕ್ತಿ ಎನ್ನುವ ಗೌರವಕ್ಕೆ ಭಾಜನರಾಗಿದ್ದರು. ಫೆಡರರ್ ವಿಂಬಲ್ಡನ್ ಪ್ರಶಸ್ತಿ ಕೈನಲ್ಲಿ ಹಿಡಿದುಕೊಂಡಿರುವ ಚಿತ್ರ ಸ್ಯ್ಟಾಂಪ್’ನಲ್ಲಿತ್ತು.
- 2003ರಲ್ಲಿ ಫೆಡರರ್ ಮೊದಲ ವಿಂಬಲ್ಡನ್ ಪ್ರಶಸ್ತಿ ಜಯಿಸಿದಾಗ, ’ಜೂಲಿಟ್ಟೇ’ ಎನ್ನುವ ಹಸುವನ್ನು ಉಡುಗೊರೆ ರೂಪದಲ್ಲಿ ನೀಡಲಾಗಿತ್ತು.
- 20 ಗ್ರ್ಯಾಂಡ್ ಸ್ಲಾಂ ಒಡೆಯ ಫೆಡರರ್ ಜಗತ್ತು ಕಂಡ ಅತ್ಯದ್ಭುತ ಟೆನಿಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.