Asianet Suvarna News Asianet Suvarna News

ಇಂಡೋ-ಆಫ್ರಿಕಾ ಟೆಸ್ಟ್: ಒಂದು ಸರಣಿ, ಇಬ್ಬರ ಭವಿಷ್ಯ ಡಿಸೈಡ್..!

Sep 28, 2019, 4:49 PM IST

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಕೆಲವೇ ದಿನಗಳು ಉಳಿದಿವೆ. ಈ ಟೆಸ್ಟ್ ಸರಣಿಯು ಟೀಂ ಇಂಡಿಯಾದ ಇಬ್ಬರು ಮುಂಬೈ ಬ್ಯಾಟ್ಸ್’ಮನ್’ಗಳ ಪಾಲಿಗೆ ತುಂಬಾನೆ ಮಹತ್ವದ್ದಾಗಿದೆ. ಒಬ್ಬರಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ನೆಲೆಯೂರುವ ತವಕವಾದರೆ, ಮತ್ತೋರ್ವರಿಗೆ ಏಕದಿನ ಕ್ರಿಕೆಟ್’ಗೆ ಕಮ್ ಬ್ಯಾಕ್ ಮಾಡುವ ಬಯಕೆ. ಹೌದು ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ರೆಡ್ ಬಾಲ್ ಕ್ರಿಕೆಟ್’ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾದರೆ, ಅಜಿಂಕ್ಯ ರಹಾನೆ ಸೀಮಿತ ಓವರ್ ಕ್ರಿಕೆಟ್’ಗೆ ಮರಳಲು ಈ ಸರಣಿ ಮಹತ್ವದ್ದಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...