Exclusive: ಪತ್ನಿ ಜೀವನದಲ್ಲಿ ಬಂದ ಬಳಿಕವೇ ಅದೃಷ್ಟ ಬದಲಾಗಿದೆ ಎಂದ ಪದಕ ವಿಜೇತ ಪ್ರಣಯ್‌!

ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. ಸಿಂಗಲ್ಸ್‌ ವಿಭಾಗದಲ್ಲಿ  ಎಚ್‌ಎಸ್‌ ಪ್ರಣಯ್‌ ಕಂಚಿನ ಪದಕ ಗೆದ್ದರೆ, ಪುರುಷರ ತಂಡ ಬೆಳ್ಳಿ ಹಾಗೂ ಚಿರಾಗ್‌-ಸಾತ್ವಿಕ್‌ ಜೋಡಿ ಚಿನ್ನದ ಪದಕ ಜಯಿದೆ.
 

First Published Oct 10, 2023, 4:09 PM IST | Last Updated Oct 12, 2023, 4:25 PM IST

ಬೆಂಗಳೂರು (ಅ.10): ಚೀನಾದ ಹಾಂಗ್ಜೋ ಏಷ್ಯನ್‌ ಗೇಮ್ಸ್‌ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಭಾರತ ತಂಡ ಇದೇ ಮೊದಲ ಬಾರಿಗೆ ಏಷ್ಯಾಡ್‌ನಲ್ಲಿ 100ಕ್ಕೂ ಅಧಿಕ ಪದಕಗಳನ್ನು ಗೆದ್ದಿದೆ. ಪದಕ ಗೆದ್ದ ಪ್ರಮುಖ ಆಟಗಾರರಾದ ಎಚ್‌ಎಸ್‌ ಪ್ರಣಯ್‌. ಪುರುಷರ ಡಬಲ್ಸ್‌ ಆಟಗಾರರಾದ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಏಷ್ಯಾನೆಟ್‌ ನ್ಯೂಸ್‌ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಎಚ್‌ಎಸ್‌ ಪ್ರಣಯ್‌ ತಮ್ಮ ಗೆಲುವಿಗೆ ಕೋಚ್‌ ಹಾಗೂ ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್‌ ಕಡೆ ಗಮನ ನೀಡಿದ್ದೇ ಕಾರಣ ಎಂದರು. ಪತ್ನಿ ಬಂದ ಬಳಿಕ ನಿಮ್ಮ ಅದೃಷ್ಟವೇ ಬದಲಾಗಿದೆಯಲ್ಲ ಎನ್ನುವ ಪ್ರಶ್ನೆಗೆ, ಅದು ಖಂಡಿತಾ ನಿಜ. ನಮ್ಮ ಕುಟುಂಬದಲ್ಲೂ ಇದೇ ಮಾತು ಹೇಳುತ್ತಾರೆ. ಆಕೆ ನನಗೆ ಲಕ್ಕಿ ಚಾರ್ಮ್‌ ಎಂದು ಒಂದೂವರೆ ವರ್ಷದ ಹಿಂದೆ ಗೆಳತಿ ಶ್ವೇತಾ ರಾಚೆಲ್‌ ಅವರನ್ನು ವಿವಾಹವಾಗಿರುವ ಪ್ರಣಯ್‌ ಹೇಳಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಚೊಚ್ಚಲ 'ಶತಕ'..!

ಇದೇ ವೇಳೆ ಪುರುಷ ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದ ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಕೂಡ ತಮ್ಮ ಚಿನ್ನದ ಗೆಲುವಿನ ಬಗ್ಗೆ ವಿವರವಾಗಿ ಮಾತನಾಡಿದರು. ಏಷ್ಯನ್‌ ಗೇಮ್ಸ್‌ಗೆ ಮಾಡಿರುವ ತಯಾರಿಯ ಬಗ್ಗೆ ಅವರು ವಿವರವಾಗಿ ಮಾತನಾಡಿದರು.