Solar eclipse on Mars: ಮಂಗಳ ಗ್ರಹದಲ್ಲಿ ಸೂರ್ಯಗ್ರಹಣ ಹೇಗೆ ಕಾಣುತ್ತೆ ಗೊತ್ತಾ? ಈ ಅದ್ಭುತ ವಿಡಿಯೋ ನೋಡಿ

ಈ ವೇಗದ ವೀಡಿಯೊವು ಅತ್ಯಧಿಕ ಫ್ರೇಮ್ ರೇಟ್‌ ಹೊಂದಿದ್ದು ಮಂಗಳದ ಮೇಲ್ಮೈಯಿಂದ ತೆಗೆದ ಫೋಬೋಸ್ ಸೂರ್ಯಗ್ರಹಣದ  ಝೂಮ್-ಇನ್ ವಿಡಿಯೋವಾಗಿದೆ

First Published Apr 24, 2022, 11:32 AM IST | Last Updated Apr 24, 2022, 11:33 AM IST

Solar eclipse on Mars: ನಾಸಾದ ಪರ್ಸೆವೆರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದ ಎರಡು ಚಂದ್ರಗಳಲ್ಲಿ ಒಂದಾದ ಫೋಬೋಸ್ ಒಳಗೊಂಡ ಗ್ರಹಣವನ್ನು ಸೆರೆಹಿಡಿದಿದೆ. ಈ ವೇಗದ ವೀಡಿಯೊವು ಅತ್ಯಧಿಕ ಫ್ರೇಮ್ ರೇಟ್‌ ಹೊಂದಿದ್ದು ಮತ್ತು ಮಂಗಳದ ಮೇಲ್ಮೈಯಿಂದ ತೆಗೆದ ಫೋಬೋಸ್ ಸೂರ್ಯಗ್ರಹಣದ ಹೆಚ್ಚಿನ ಝೂಮ್-ಇನ್ ವಿಡಿಯೋವಾಗಿದೆ. ನಾಸಾದ ರೋವರ್‌ಗಳ ದೃಶ್ಯಗಳು ವಿಜ್ಞಾನಿಗಳಿಗೆ ಚಂದ್ರನ ಕಕ್ಷೆಗಳಲ್ಲಿನ ಸೂಕ್ಷ್ಮ ಬದಲಾವಣೆಗಳ ಕುರಿತು ಹೊಸ ದೃಷ್ಟಿಕೋನಗಳನ್ನು ನೀಡುತ್ತವೆ.

ಫೋಬೋಸ್ ಮಂಗಳ ಗ್ರಹದ ಕಡೆಗೆ ನಿಧಾನವಾಗಿ ಚಲಿಸುತ್ತಿದೆ. ವಿಜ್ಞಾನಿಗಳ ಪ್ರಕಾರ,  ಲಕ್ಷಾಂತರ ವರ್ಷಗಳ ನಂತರ ಇವು ಘರ್ಷಣೆ ಮಾಡಲಿವೆ.  ಮಂಗಳ ಗ್ರಹದ ಫೋಬೋಸ್‌ನ ಸಾಮೀಪ್ಯದಿಂದ ಉಂಟಾದ ತೀವ್ರವಾದ ಉಬ್ಬರವಿಳಿತದ ಶಕ್ತಿಗಳನ್ನು ಅರ್ಥಮಾಡಿಕೊಳ್ಳಲು, ಈ ಗ್ರಹಣಗಳು ವಿಜ್ಞಾನಿಗಳಿಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: ಮಂಗಳನ ಅಂಗಳದಿಂದ ಸೂರ್ಯೋದಯ ಹೇಗೆ ಕಾಣುತ್ತೆ ಗೊತ್ತಾ? ನಾಸಾ ಸೆರೆಹಿಡಿದ ಈ ಚಿತ್ರ ನೋಡಿ

ಪರ್ಸೆವೆರೆನ್ಸ್ ರೋವರ್‌ನ ಮುಖ್ಯ ಉದ್ದೇಶವೆಂದರೆ ಮಂಗಳ ಗ್ರಹದಲ್ಲಿ ಪ್ರಾಚೀನ ಸೂಕ್ಷ್ಮಜೀವಿಯ ಜೀವನದ ಚಿಹ್ನೆಗಳನ್ನು ಹುಡುಕುವುದು. ರೋವರ್ ಮಂಗಳ ಗ್ರಹದ ರೆಗೋಲಿತ್, ಬಂಡೆ ಮತ್ತು ಧೂಳನ್ನು ಪರೀಕ್ಷಿಸುತ್ತಿದೆ ಮತ್ತು ಮಾದರಿಗಳನ್ನು ಸಂಗ್ರಹಿಸಿಸುತ್ತಿರುವ ಮೊದಲ ರೋವರ್ ಆಗಿದೆ.

ಒಂದು ದಿನದ ಹಿಂದೆ ನಾಸಾ ಹಂಚಿಕೊಂಡಿರುವ ಈ ವೀಡಿಯೊವನ್ನು 2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳ ದೊರೆತ್ತಿದ್ದು, ಈ ಅದ್ಭುತ ವಿಡಿಯೋಗೆ ನೆಟ್ಟಿಗರು ಬೆರಗುಗೊಂಡಿದ್ದಾರೆ.