Special 3 Circle: ಚಂದ್ರನಲ್ಲಿ ಇನ್ಮುಂದೆ ಬೆಳೆಯಲಿದೆ ತರಕಾರಿ ಹಣ್ಣು, ಹಂಪಲು!

ಚಂದ್ರನಲ್ಲಿ ಇನ್ನು ಮುಂದೆ ತರಕಾರಿ, ಹಣ್ಣು, ಹಂಪಲು ಬೆಳೆಯಬಹುದಂತೆ. ಈ ಸಂಬಂಧ ಚಂದ್ರನ ಮಣ್ಣಿನಲ್ಲಿ ವರ್ಷಾನುಗಟ್ಟಲೆಯಿಂದ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ.  

First Published Oct 5, 2022, 4:33 PM IST | Last Updated Oct 5, 2022, 4:33 PM IST

ಚಂದ್ರನಲ್ಲಿ ಇನ್ನು ಮುಂದೆ ತರಕಾರಿ, ಹಣ್ಣು, ಹಂಪಲು ಬೆಳೆಯಬಹುದಂತೆ. ಚಂದ್ರ ಲೋಕದಿಂದ ಸ್ಪೆಷಲ್ ತರಕಾರಿ ರೆಡಿಯಾಗಲಿದೆಯಂತೆ. ಈ ಸಂಬಂಧ ವರ್ಷಾನುಗಟ್ಟಲೆಯಿಂದ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಚಂದ್ರನ ಮಣ್ಣಿನಲ್ಲಿ ಈ ಯಶಸ್ವಿ ಪ್ರಯೋಗ ನಡೆದಿದೆ. ಚಂದ್ರನ ಮಣ್ಣಿನಲ್ಲಿ ಬೆಳೆಸಲಾದ ಮೊದಲ ತರಕಾರಿ ಯಾವುದು ಗೊತ್ತಾ..? ಹೂಕೋಸು. ಹಾಗಂತ, ಚಂದ್ರಲೋಕಕ್ಕೆ ಹೋಗಿ ಆರಾಮಾಗಿ ಹಣ್ಣು, ತರಕಾರಿ ಬೆಳೀತೀನಿ ಅನ್ಬೇಡಿ. ಯಾಕಂದ್ರೆ, ಚಂದ್ರಲೋಕದಲ್ಲಿ ಕೃಷಿ ಮಾಡುವವರಿಗೆ ಸವಾಲು ಎದುರಾಗಲಿದೆ. ಭೂಮಿಯ ವಾತಾವರಣಕ್ಕೂ, ಅಲ್ಲಿನ ವಾತಾವರಣಕ್ಕೂ ಭಾರಿ ವ್ಯತ್ಯಾಸವಿದೆ.