Chandrayaan 3: ಸಾಫ್ಟ್ ಲ್ಯಾಂಡಿಂಗ್ ಎಂದರೇನು? ರೋವರ್ ಕಾರ್ಯ ಹೇಗಿರಲಿದೆ, ಇಲ್ಲಿದೆ ಮಾಹಿತಿ
ಚಂದ್ರನ ನೆಲದಲ್ಲಿ ಸಾಫ್ಟ್ ಲ್ಯಾಂಡಿಂಗ್ ಎಂದರೇನು? ರೋವರ್‌ರ ಕಾರ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರು (ಆ.23): ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್ ಇಂದು ನಡೆಯಲಿದೆ. ಹಾಗಿದ್ದರೆ, ಸಾಫ್ಟ್ ಲ್ಯಾಂಡಿಂಗ್ ಎಂದರೇನು? ರೋವರ್ ಅಲ್ಲಿ ಹೇಗೆ ಕಾರ್ಯ ಮಾಡಲಿದೆ ಎನ್ನುವ ಕುರಿತಾದ ವಿವರಗಳು ಇಲ್ಲಿವೆ. ವಿಕ್ರಮ್ ಲ್ಯಾಂಡರ್‌ನ ಒಳಗಡೆ ಪ್ರಗ್ಯಾನ್ ರೋವರ್ ಇದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸ್ಪರ್ಶ ಮಾಡಿದ ಬಳಿಕ 20 ಕೆಜಿ ತೂಕದ ರೋವರ್ ಅದರ ಒಳಗಿನಿಂದ ಹೊರಗಡೆ ಬರಲಿದೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ: ಚಂದ್ರಯಾನ-3