Chandrayaan 3: ಚಂದ್ರನ ನೆಲದತ್ತ ಭಾರತ, ಶಶಿಯ ಆಗಸದಲ್ಲಿ ವಿಕ್ರಮ್‌ ಅನಾವರಣ!


Vikram Lander Separated: ಭಾರತದ ಅತೀ ಮಹತ್ವದ ಯೋಜನೆ ಚಂದ್ರಯಾನ-3 ಯೋಜನೆಯ ಪ್ರಮುಖ ಪ್ರಕ್ರಿಯೆಯನ್ನು ಇಸ್ರೋ ಗುರುವಾರ ನಡೆಸಿದೆ. ಪ್ರಪಲ್ಶನ್‌ ಮಾಡ್ಯೂಲ್‌ ಹಾಗೂ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಕಕ್ಷೆಯಲ್ಲಿ ಬೇರೆ ಬೇರೆಯಾಗಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.17): ಭಾರತದ ಅತ್ಯಂತ ಮಹತ್ವದ ಚಂದ್ರಯಾನ-3 ಯೋಜನೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಜುಲೈ 14 ರಂದು ನಭಕ್ಕೆ ಹಾರಿದ್ದ ಚಂದ್ರಯಾನ-3 ನೌಕೆ ಇಲ್ಲಿಯವರೆಗೂ ಪ್ರಪಲ್ಶನ್‌ ಮಾಡ್ಯುಲ್‌ ಜೊತೆ ಪ್ರಯಾಣ ಮಾಡಿತ್ತು. ಗುರುವಾರ ಚಂದ್ರನ ಕಕ್ಷೆಯಲ್ಲಿ ಪ್ರಪಲ್ಶನ್‌ ಮಾಡ್ಯುಲ್‌ ಹಾಗೂ ವಿಕ್ರಮ್‌ ಲ್ಯಾಂಡರ್‌ ಬೇರೆಬೇರೆಯಾಗಿದೆ.

ಗುರುವಾರ ಅಂದಾಜು ಮೂರು ಗಂಟೆಯ ಕಾರ್ಯದಲ್ಲಿ ಇಸ್ರೋ, ಚಂದ್ರನ ಕಕ್ಷೆಯಲ್ಲಿರುವ ಪ್ರಪಲ್ಶನ್‌ ಮಾಡ್ಯುಲ್‌ ಹಾಗೂ ವಿಕ್ರಮ್‌ ಲ್ಯಾಂಡರ್‌ಅನ್ನು ಬೇರೆಬೇರೆ ಮಾಡಿದೆ. ಇನ್ನು ಇದೇ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದೆ. 

Chandrayaan-3 vs Lunar-25: ಆಮೆ-ಮೊಲದ ಸ್ಪೇಸ್‌ ರೇಸ್‌ನಲ್ಲಿ ಗೆಲ್ಲೋದ್‌ ಯಾರು?

ವಿಕ್ರಮ್‌ ಲ್ಯಾಂಡರ್‌ನ ಒಳಗೆ ಪ್ರಜ್ಞಾನ್‌ ರೋವರ್‌ ಇದ್ದು, ಆಗಸ್ಟ್‌ 23 ಅಥವಾ 24 ರಂದು ಲ್ಯಾಂಡರ್‌ ಚಂದ್ರನ ಮೇಲೆ ಇಳಿದ ಬಳಿಕ, ಅದರ ಒಳಗಿನಿಂದ ರೋವರ್‌ ಹೊರಬರಬೇಕು. ಅಲ್ಲಿಗೆ 615 ಕೋಟಿ ರೂಪಾಯಿ ವೆಚ್ಚದ ಭಾರತದ ಚಂದ್ರಯಾನ-3 ಯೋಜನೆ ಯಶಸ್ಸು ಗಳಿಸಿದಂತೆ.

Related Video