ಇಂದು 'ಪದವಿ ಪೂರ್ವ' ಸಿನಿಮಾ ಬಿಡುಗಡೆ: ಇದು 90ರ ದಶಕದ ಕಾಲೇಜು ಜೀವನ ಚಿತ್ರಣ

ಇಂದು ಯೋಗರಾಜ್ ಭಟ್ ನಿರ್ಮಾಣದ ಪದವಿ ಪೂರ್ವ ಸಿನಿಮಾ, ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. 

Share this Video
  • FB
  • Linkdin
  • Whatsapp

'ಪದವಿ ಪೂರ್ವ' 90ರ ದಶಕದ ಕಾಲೇಜು ಜೀವನ ಚಿತ್ರಣ ಇರುವ ಸಿನಿಮಾ. ಈ ಡಿಜಿಟಲ್ ದುನಿಯಾದಿಂದ ವಾಪಾಸ್ ಅನ್ಲಾಗ್ ಕಾಲಕ್ಕೆ ಕರೆದುಕೊಂಡು ಹೋಗು ಈ ಸಿನಿಮಾದಲ್ಲಿ ಪೀಪಿ ನವೀನನ ಲವ್ ಸ್ಟೋರಿ ಇದೆ. ಇಲ್ಲಿ ಪೀಪಿ ನವೀನನಾಗಿ ಪೃಥ್ವಿ ಶಾಮನೂರು ನಟಿಸಿದ್ದು, ನಾಯಕಿಯರಾಗಿ ಅಂಜಲಿ ಅನೀಶ್, ಯಶ ಶಿವಕುಮಾರ್ ನಟಿಸಿದ್ದಾರೆ. ಇವರ ಜೊತೆಗೆ ಅದಿತಿ ಪ್ರಭುದೇವ, ದಿವ್ಯಾ ಉರುಡುಗ, ನಯನ ವಿಶೇಷ ಪಾತ್ರದಲ್ಲಿದ್ದು ರಂಗಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಪೋಷಕ ನಟರ, ಕಾಮಿಡಿ ಕಿಲಾಡಿಗಳ ಮೇಳವೂ ಇದೆ. ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರೋ ಸಿನಿಮಾಗೆ ಹರಿಪ್ರಸಾದ್ ಜಯಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.

Related Video