ಪವನ್ ಕಲ್ಯಾಣ್-ಬಾಲಕೃಷ್ಣ ಅಪೂರ್ವ ಸಂಗಮ: ದ್ವೇಷ ಮರೆತ ದೊಡ್ಡ ಕುಟುಂಬ

ಚಿರಂಜೀವಿ ಹಾಗೂ ಎನ್.ಟಿ.ಆರ್ ಕುಟುಂಬದ ಮಧ್ಯೆ ಇದ್ದ ಮುನಿಸಿನ ಕಾರ್ಮೋಡ ಸರಿದು, ಇದೀಗ ಎರಡು ಕುಟುಂಬಗಳು ಒಂದಾಗಿವೆ. ಅದರ ಫಲವೇ ಪವನ್ ಕಲ್ಯಾಣ್ ಹಾಗೂ ಬಾಲಕೃಷ್ಣ ಅಪೂರ್ವ ಸಂಗಮ.

Share this Video
  • FB
  • Linkdin
  • Whatsapp

ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬ ಹಾಗೂ ಚಿರಂಜೀವಿ ಕುಟುಂಬಕ್ಕೆ ಮೊದಲಿನಿಂದಲೂ ಸ್ನೇಹ ಸಂಬಂಧ ಸರಿ ಇರಲಿಲ್ಲ. ದಶಕಗಳಿಂದಿದ್ದ ಈ ವೈರತ್ವ ಎಂದೂ ಸರಿ ಹೋಗಲ್ಲ ಅಂತ ತೆಲುಗು ಮಂದಿ ಅಂದುಕೊಂಡಿದ್ರು. ನಂದಮೂರಿ ಕುಟುಂಬದ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಚಿರಂಜೀವಿ ಕುಟುಂಬದ ರಾಮ್‌ ಚರಣ್‌ ತೇಜ್‌ ಒಂದಾದ್ರು. ಇವರ ಸ್ನೇಹಕ್ಕೆ RRR ಸಿನಿಮಾ ಸಾಕ್ಷಿ ಆಯ್ತು. ಇದೀಗ ಈ ಎರಡೂ ಫ್ಯಾಮಿಲಿಯ ಮತ್ತಿಬ್ಬರು ಸ್ಟಾರ್ಸ್ ಆಗಿರೋ ಪವನ್ ಕಲ್ಯಾನ್ ಹಾಗೂ ಬಾಲಕೃಷ್ಣ ಒಂದೇ ಮುಖಾಮುಖಿ ಆಗಿ ಹಳೇ ವೈರತ್ವ ಮರೆತಿದ್ದಾರೆ. ಬಾಲಕೃಷ್ಣ ಅಭಿನಯಿಸುತ್ತಿರುವ 'ವೀರಸಿಂಹರೆಡ್ಡಿ' ಸೆಟ್‌ಗೆ ಮೆಗಾಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಭೇಟಿ ಕೊಟ್ಟು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.

Related Video