Asianet Suvarna News Asianet Suvarna News

‘ಕಾಂತಾರ’ ಕ್ಲೈಮ್ಯಾಕ್ಸ್ ನೋಡುತ್ತಿದ್ದಂತೆ ಮಹಿಳೆ ಮೇಲೆ ದೈವ ಆವಾಹನೆ?

ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್  ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಮಹಿಳೆ ವರ್ತಿಸಿದ್ದಾರೆ. 

Oct 4, 2022, 12:40 AM IST

ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್  ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಮಹಿಳೆ ವರ್ತಿಸಿದ್ದಾರೆ. ಕಾಂತಾರ ಬಿಡುಗಡೆಯಾದಾಗಿಂದ ಎಲ್ಲಿ ನೋಡಿದರೂ ಅಬ್ಬರ ಜೋರಾಗಿದೆ. ಕಾಂತಾರ ಇದೊಂದು ಕೇವಲ ಸಿನಿಮಾ ಅಷ್ಟೇ ಅಲ್ಲ, ಇದು ಕನ್ನಡಿಗರ ಹೆಮ್ಮೆ. ಇದನ್ನು ಅನುಭವಿಸಿಯೇ ನೋಡಬೇಕು. ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ಪ್ರಸ್ತುತಿ ಈ ಚಿತ್ರದಲ್ಲಿದೆ. ಇನ್ನು ಈ ಸಿನಿಮಾ ಕಂಡ ಪ್ರತಿಯೊಬ್ಬರೂ ಅದ್ಭುತ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕ್ಲೈಮ್ಯಾಕ್ಸ್ ನ 15 ರಿಂದ 20 ನಿಮಿಷ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಿಲಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ರಿಷಬ್​ ಶೆಟ್ಟಿ ಅಭಿನಯ ಎಲ್ಲರನ್ನೂ ಫಿದಾಗೊಳಿಸಿದೆ. ಸದ್ಯ ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಮಹಿಳೆ ವರ್ತಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment