ಸುದೀಪ್‌ರಿಂದ ಮತ್ತೊಂದು ಮಹತ್ತರ ಕಾರ್ಯ; ಅನಾಥ ಮಹಿಳೆಗೆ ಮನೆ ನಿರ್ಮಾಣ

ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ರು ಕೂಡ ಕಿಚ್ಚ ತನ್ನ ಕರ್ತವ್ಯವನ್ನ ಮಾತ್ರ ಮರೆತಿಲ್ಲ. ಕಿಚ್ಚ ಸುದೀಪ್ ಚಿತ್ರದುರ್ಗದ ಚಳ್ಳಕೆರೆ ಗ್ರಾಮದ ಅನಾಥ ಮಹಿಳೆಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. 

First Published Jul 1, 2022, 5:46 PM IST | Last Updated Jul 1, 2022, 5:54 PM IST

ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ರು ಕೂಡ ಕಿಚ್ಚ ತನ್ನ ಕರ್ತವ್ಯವನ್ನ ಮಾತ್ರ ಮರೆತಿಲ್ಲ. ಹೌದು ಕಿಚ್ಚ ಸಿನಿಮಾದ ಜೊತೆ ಜೊತೆಗೆ ಸಮಾಜಕಾರ್ಯವನ್ನೂ ಮಾಡುತ್ತಾ ಬಂದಿದ್ದಾರೆ. ನಟ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿ ಆಗಿದ್ರು ಕೂಡ ಸಮಾಜಸೇವೆ ಕೆಲಸಕ್ಕಾಗಿ ಬಿಡುವು ಮಾಡಿಕೊಳ್ತಾರೆ. ಸದ್ಯ ತಮ್ಮ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲಿದ್ದು ಅದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಕೂಡ ಅದ್ರ ಮಧ್ಯೆ ಬಡವರಿಗೆ, ಶ್ರಮಿಕರಿಗೆ ಸಹಾಯ ಮಾಡುವುದನ್ನ ಮರೆತಿಲ್ಲ. ಯೆಸ್ ಕಿಚ್ಚ ಸುದೀಪ್ ಚಿತ್ರದುರ್ಗದ ಚಳ್ಳಕೆರೆ ಗ್ರಾಮದ ಅನಾಥ ಮಹಿಳೆಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಹೊನ್ನೂರಮ್ಮ ಅನ್ನೋ ಮಹಿಳೆಗೆ ಕುಟುಂಬದವರು ಯಾರು ಇರಲಿಲ್ಲ. ಈ ವಿಚಾರ ಕಿಚ್ಚನ ಕಿವಿಗೆ ಬಿದ್ದಿತ್ತು, ಮಹಿಳೆಯ ಕಷ್ಟ ಅರಿತ ಕಿಚ್ಚ ಹೊನ್ನೂರಮ್ಮ ಅವ್ರಿಗೆ ಎರಡು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.