Asianet Suvarna News Asianet Suvarna News

ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್: ಪತ್ನಿ ಜೊತೆ ಜಾಲಿ ಮೂಡ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ಯಶ್ ಟಾಕ್ಸಿಕ್ ನ ಗುಟ್ಟಾಗಿ, ಅಚ್ಚುಕಟ್ಟಾಗಿ ರೆಡಿ ಮಾಡ್ತಾ ಇದ್ದಾರೆ.

First Published Sep 29, 2024, 5:36 PM IST | Last Updated Sep 29, 2024, 5:36 PM IST

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ಯಶ್ ಟಾಕ್ಸಿಕ್ ನ ಗುಟ್ಟಾಗಿ, ಅಚ್ಚುಕಟ್ಟಾಗಿ ರೆಡಿ ಮಾಡ್ತಾ ಇದ್ದಾರೆ. ಬೆಂಗಳೂರಿನ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಹಾಕಿದ ಸೆಟ್ ನಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಈಗಾಗ್ಲೇ ಕಂಪ್ಲೀಟ್ ಆಗಿದೆ. ಅಂದುಕೊಂಡಂತೆ ಮೊದಲ ಶೆಡ್ಯೂಲ್ ಮುಗಿಸಿರೋ ರಾಕಿ ಸದ್ಯ ಮುಂಬೈಗೆ ಹಾರಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡದಲ್ಲಷ್ಟೇ ಅಲ್ಲ ಇಡೀ ಇಂಡಿಯಾದಲ್ಲೇ ದೊಡ್ಡ ನಿರೀಕ್ಷೆ ಇರೋ ಸಿನಿಮಾ ಯಾವುದು ಅಂದ್ರೆ ಅದು ಟಾಕ್ಸಿಕ್. ಕೆಜಿಎಫ್ ಸರಣಿಯ ಗ್ಲೋಬಲ್ ಸಕ್ಸಸ್ ನಂತರ ರಾಕಿಭಾಯ್ ಮುಂದೇನು ಮಾಡ್ತಾರೆ ಅಂತ ಕಾದಿರೋ ಫ್ಯಾನ್ಸ್ ಗೆ ಸಿದ್ದವಾಗ್ತಿರೋ ಉತ್ತರವೇ ಈ ಟಾಕ್ಸಿಕ್. 

ಸಿಕ್ಕಾಪಟ್ಟೆ ಟೈಮ್ ತೆಗೆದುಕೊಂಡು, ದೊಡ್ಡ ಮಟ್ಟದ ತಯಾರಿ ಮಾಡಿಕೊಂಡು , ಅದ್ಭುತ ಕಲಾವಿದರು ತಂತ್ರಜ್ಞರನ್ನ ಜೊತೆಗೆ ಸೇರಿಸಿಕೊಂಡು ಯಶ್ ಈ ಸಿನಿಮಾವನ್ನ ಅದ್ಭುತವಾಗಿ ರೆಡಿ ಮಾಡ್ತಾ ಇದ್ದಾರೆ. KVN ಪ್ರೊಡಕ್ಷನ್ಸ್ ಜೊತೆಗೆ ಯಶ್ ಒಡೆತನದ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ಕೂಡ ಈ ಸಿನಿಮಾಗೆ ಬಂಡವಾಳ ಹೂಡ್ತಾ ಇದೆ. ಕೆಜಿಎಫ್ ಮೂಲಕ ಸೃಷ್ಟಿಯಾಗಿರೋ ನಿರೀಕ್ಷೆಗೆ ತಕ್ಕಂತೆ ವಿಶ್ವವೇ ತಿರುಗಿ ನೋಡುವಂತೆ ಈ ಸಿನಿಮಾ ರೆಡಿ ಮಾಡಬೇಕು ಅನ್ನೋದು ಯಶ್ ಕನಸು. ಆ ಕನಸಿನ ಒಂದು ಅಧ್ಯಾಯ ಈಗಾಗ್ಲೇ ಕಂಪ್ಲೀಟ್ ಆಗಿದೆ. ಹೌದು ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಯಶಸ್ವಿಯಾಗಿ ಮುಕ್ತಾಯ ಆಗಿದೆ. ಕಳೆದ ತಿಂಗಳು 8ನೇ ತಾರೀಖು ಟಾಕ್ಸಿಕ್ ಸಿನಿಮಾದ ಮುಹೂರ್ತ ನಡೆದಿತ್ತು. ಆವತ್ತೇ ಶೂಟಿಂಗ್ ಕೂಡ ಶುರುವಾಗಿತ್ತು. ನಿರ್ದೇಶಕಿ ಗೀತು ಮೋಹನ್ ದಾಸ್ ಅಲ್ಲಿಂದ ಸತತವಾಗಿ ಒಂದೂವರೇ ತಿಂಗಳು ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ. 

ಹೆಚ್. ಎಂ.ಟಿ ಫ್ಯಾಕ್ಟರಿ ಅಂಗಳದಲ್ಲಿ ಹಾಕಲಾದ ಸೆಟ್ ನಲ್ಲಿ ಭರದಿಂದ ಚಿತ್ರೀಕರಣ ನಡೆದಿದ್ದು ಹಲವು ಹಾಲಿವುಡ್ ಬಾಲಿವುಡ್ ತಂತ್ರಜ್ಞರು ಮತ್ತು ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಟಾಕ್ಸಿಕ್ ನಲ್ಲಿ ಡ್ರಗ್ ಮಾಫಿಯಾ ಸಬ್ಜೆಕ್ಟ್ ಇದೆ ಅಂತ ಹೇಳಲಾಗಿದ್ದು,  ರಾಕಿಭಾಯ್ ಗೂ ಮೀರಿಸೋ ಡಾನ್ ಪಾತ್ರದಲ್ಲಿ ಯಶ್ ಮಿಂಚ್ತಾ ಇದ್ದಾರೆ.  ಯಶ್ ಸೋದರಿ ಪಾತ್ರದಲ್ಲಿ  ಲೇಡಿ ಸೂಪರ್ ಸ್ಟಾರ್  ನಯನ ತಾರಾ ನಟಿಸ್ತಾ ಇದ್ದು, ಮೊದಲ ಶೆಡ್ಯೂಲ್ ನಲ್ಲಿ ನಯನತಾರಾ ಕೂಡ ಯಶ್ ಜೊತೆಗೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ರು. ಸದ್ಯ ಮೊದಲ ಹಂತದ ಶೂಟ್ ಮುಗಿಸಿರೋ ಖುಷಿಯಲ್ಲಿರೋ ಯಶ್ ಮುಂಬೈಗೆ ಹಾರಿದ್ದಾರೆ. 

ಒಂದಿಷ್ಟು ಕಮರ್ಷಿಯಲ್ ಌಡ್ ಗಳ ಮೀಟಿಂಗ್, ಬಾಲಿವುಡ್ ಪ್ರಾಜೆಕ್ಟ್ ರಾಮಾಯಣದ ಕುರಿತ ಚರ್ಚೆ ಮತ್ತು ಟಾಕ್ಸಿಕ್ ಮುಂದಿನ ಭಾಗದ ಕುರಿತ ಚರ್ಚೆ ಕೂಡ ಅಲ್ಲಿ ನಡೀತಾ ಇದೆಯಂತೆ. ಪತ್ನಿ ರಾಧಿಕಾ ಜೊತೆಗೆ ಯಶ್ ಮುಂಬೈ ನಲ್ಲಿದ್ದು ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಯಶ್ ಮುಂಬೈನಲ್ಲಿ ಪ್ರತ್ಯಕ್ಷ ಆಗಿದ್ದೇ ತಡ. ರಾಕಿಯನ್ನ ನೋಡೋಕೆ ಫ್ಯಾನ್ಸ್ ಮುಗಿ ಬಿದ್ದಿದ್ರು. ಇನ್ನೂ ಯಶ್ ಖ್ಯಾತ ನಟ ತನಿಕೆಲ್ಲ ಭರಣಿಯವರನ್ನ ಮೀಟ್ ಮಾಡಿದ್ದು, ಆ ಫೋಟೊ ಕೂಡ ವೈರಲ್ ಆಗ್ತಾ ಇದೆ. ಮೂಲಗಳ ಪ್ರಕಾರ ತನಿಕೆಲ್ಲ ಭರಣಿ ಕೂಡ ಟಾಕ್ಸಿಕ್ ನಲ್ಲಿ ಒಂದು ಪ್ರಮುಖ ಪಾತ್ರ ಮಾಡ್ತಾ ಇದ್ದಾರೆ. 

ನಯನತಾರಾ ಸದ್ಯ ಪತಿ ವಿಘ್ನೇಶ್ ಮತ್ತು ಮಕ್ಕಳ ಜೊತೆಗೆ ಗ್ರೀಸ್ ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಾ ಇದ್ದಾರೆ. ನಯನತಾರಾ ಕೂಡ ಟಾಕ್ಸಿಕ್ ಸಿನಿಮಾದ ಟೈಟ್ ಶೆಡ್ಯೂಲ್ ನ ಶೂಟಿಂಗ್ ನಂತರ ಈ ಬ್ರೇಕ್ ತೆಗೆದುಕೊಂಡಿದ್ದಾರೆ. ಒಟ್ಟಾರೆ ರಾಕಿಭಾಯ್ ಸೈಲೆಂಟ್ ಆಗಿ ಟಾಕ್ಸಿಕ್ ಸಿನಿಮಾದ ಮೊಲದ ಹಂತದ ಶೂಟ್ ಮುಗಿಸಿದ್ದಾರೆ. ಅದ್ಭುತ ಕಲಾವಿದರು, ತಂತ್ರಜ್ಞರು ಮತ್ತು ದೊಡ್ಡ ಮಟ್ಟದ ತಯಾರಿ ಇರೋದ್ರಿಂದ ಸಿನಿಮಾ ಶರವೇಗದಲ್ಲಿ ಶೂಟ್ ಆಗ್ತಾ ಇದೆ. ಸದ್ಯದ ಸ್ಪೀಡ್ ನೋಡ್ತಿದ್ರೆ ಮೊದಲೇ ಅನೌನ್ಸ್ ಮಾಡಿದಂತೆ ಏಪ್ರಿಲ್ 10, 2025ಕ್ಕೆ ಟಾಕ್ಸಿಕ್ ತೆರೆಗೆ ಬಂದ್ರೂ ಅಚ್ಚರಿ ಪಡಬೇಕಿಲ್ಲ.