ಹೀಗೆ ಶುರುವಾಯ್ತು ಡಾಲಿ ಧನಂಜಯ್-ಧನ್ಯತಾ ಪ್ರೇಮ್​ಕಹಾನಿ: ಆಕ್ಟರ್ ವೆಡ್ಸ್ ಡಾಕ್ಟರ್!

ಸ್ಯಾಂಡಲ್​ವುಡ್​ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್, ನಟರಾಕ್ಷಸ ಡಾಲಿ ಧನಂಜಯ್ ಇತ್ತೀಚಿಗಷ್ಟೇ ತಮ್ಮ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರು. ಡಾಕ್ಟರ್​ ಜೊತೆ ಸಪ್ತಪದಿ ತುಳಿಯೋದಕ್ಕೆ ಸಜ್ಜಾಗಿರೋ ಈ ಆಕ್ಟರ್ , ತಮ್ಮ ಪ್ರೇಮ್​ಕಹಾನಿಯನ್ನ ನಮ್ ಜೊತೆ ಹಂಚಿಕೊಂಡಿದ್ದಾರೆ.
 

First Published Nov 17, 2024, 4:45 PM IST | Last Updated Nov 17, 2024, 4:45 PM IST

ಸ್ಯಾಂಡಲ್​ವುಡ್​ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್, ನಟರಾಕ್ಷಸ ಡಾಲಿ ಧನಂಜಯ್ ಇತ್ತೀಚಿಗಷ್ಟೇ ತಮ್ಮ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರು. ಡಾಕ್ಟರ್​ ಜೊತೆ ಸಪ್ತಪದಿ ತುಳಿಯೋದಕ್ಕೆ ಸಜ್ಜಾಗಿರೋ ಈ ಆಕ್ಟರ್ , ತಮ್ಮ ಪ್ರೇಮ್​ಕಹಾನಿಯನ್ನ ನಮ್ ಜೊತೆ ಹಂಚಿಕೊಂಡಿದ್ದಾರೆ. ಬನ್ನಿ ಹಾಗಾದ್ರೆ ಡಾಲಿಯ ಜಾಲಿ ಲವ್ ಸ್ಟೋರಿನ ಅವ್ರಿಂದ್ಲೇ ಕೇಳೋಣ. ದೀಪಾವಳಿ ಹಬ್ಬದ ದಿನ ಡಾಲಿ ಧನಂಜಯ್ ತಮ್ಮ ಮದುವೆ ಸುದ್ದಿಯನ್ನ ಅನೌನ್ಸ್ ಮಾಡಿದ್ರು. ಮದುವೆ ಯಾವಾಗ.. ಮದುವೆ ಯಾವಾಗ ಅಂತ ಕೇಳ್ತಿದ್ದವರಿಗೆಲ್ಲಾ ಸಿಹಿ ಸುದ್ದಿ ಕೊಟ್ಟಿದ್ರು. 

ತಮ್ಮ ಬಾಳ ಸಂಗಾತಿಯಾಗಲಿರೋ ಧನ್ಯತಾರನ್ನ ಎಲ್ಲರಿಗೂ ಪರಿಚಯ ಮಾಡ್ಸಿದ್ರು. ಆಕ್ಟರ್ ಡಾಲಿ ಮನಸು ಕದ್ದಿರೋ  ಚೆಲುವೆ ಧನ್ಯತಾ ವೃತ್ತಿಯಲ್ಲಿ ಡಾಕ್ಟರ್. ಚಿತ್ರದುರ್ಗ ಮೂಲದ ಡಾಕ್ಟರ್ ಧನ್ಯತಾ ಮೈಸೂರಿನಲ್ಲಿ ಎಂಬಿಬಿಎಸ್ ಓದಿದ್ದಾರೆ. ಸದ್ಯ ಗೈನಕಾಲಾಜಿಸ್ಟ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಈ ಡಾಕ್ಟರ್, ಆಕ್ಟರ್ ಡಾಲಿಗೆ ಸಿಕ್ಕಿದ್ದೆಲ್ಲಿ..? ಇವರ ಪ್ರೇಮ್​ಕಹಾನಿ ಶುರುವಾಗಿದ್ಹೇಗೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಈ ಪ್ರಶ್ನೆಗೆ ಡಾಲಿ ಉತ್ತರಿಸಿದ್ದು ಹೇಗೆ..? ತಮ್ಮದು ಅಪ್ಪಟ ಲವ್ ಮ್ಯಾರೇಜ್ ಅಂದಿರೋ ಡಾಲಿ, ಮುಂದಿನ ದಿನಗಳಲ್ಲಿ ಫುಲ್ ಪ್ರೇಮ್​​ಕಹಾನಿ ಹೇಳ್ತಿನಿ ಅಂತಿದ್ದಾರೆ. 

ಕಳೆದ ಕೆಲ ವರ್ಷಗಳಿಂದಲೂ ಧನಂಜಯ್‌ಗೆ  ಧನ್ಯತಾ ಜೊತೆಗೆ ಒಡನಾಟ ಇತ್ತು. ತಮ್ಮ ಅಜ್ಜಿಗೂ ಡಾಲಿ, ಭಾವಿ ಪತ್ನಿಯನ್ನ ಭೇಟಿ ಮಾಡಿಸಿದ್ರಂತೆ. 2025ರ ಫೆಬ್ರುವರಿ 16ಕ್ಕೆ ಧನಂಜಯ್ ಧನ್ಯತಾ ಮದುವೆ ನಡೆಯಲಿದ್ದು, ಅರಮನೆ ನಗರಿಯಲ್ಲೇ ಈ ಜೋಡಿಯ ವಿವಾಹ ನೆರವೇರಲಿದೆ. ಮದುವೆಗೆ ಸೆಲೆಬ್ರಿಟೀಸ್ ಜೊತೆಗೆ ಅಭಿಮಾನಿಗಳನ್ನೂ ಆಹ್ವಾನಿಸಿ , ಊಟ ಹಾಕ್ಸೋಕೆ ಡಾಲಿ ಪ್ಲ್ಯಾನ್ ಮಾಡಿದ್ದಾರೆ. ಮದುವೆಗೆ ಇನ್ನೆರಡೇ ತಿಂಗಳು ಬಾಕಿ ಇದ್ದು, ಸದ್ಯ ಅದರದ್ದೇ ತಯಾರಿಯಲ್ಲಿ ಧನಂಜಯ್ ಬ್ಯುಸಿಯಾಗಿದ್ದಾರೆ. ಈ ನಡುವೆ ರಿಲೀಸ್​ಗೆ ಸಜ್ಜಾಗಿರೋ ಬಹುಭಾಷಾ ಚಿತ್ರ ಜೀಬ್ರಾ ಸಿನಿಮಾದ ಪ್ರಮೋಷನ್ಸ್ ಕೂಡ ಮಾಡ್ತಾ ಇದ್ದಾರೆ. ಸದ್ಯದಲ್ಲೇ ಮದುವೆಗೆ ಕರೀತಿನಿ ಮಿಸ್ ಮಾಡ್ದೇ ಬಂದುಬಿಡಿ ಅಂತ್ತಿದ್ದಾರೆ.