ಮಗಳು ಸಂತೋಷ ತಂದ್ಳು, ಮಗ ಸಂಪತ್ತು ತಂದ; ಟಗರು ಪಲ್ಯ ನಟಿ ಅಮೃತಾ ಪ್ರೇಮ್, ನೆನಪಿರಲಿ ಪ್ರೇಮ್ ಎಕ್ಸ್‌ಕ್ಲೂಸಿವ್ ಇಂಟರ್‌ವ್ಯೂ
ದೀಪಾವಳಿ ಸ್ಪೆಷಲ್ ಎನ್ನುವಂತೆ ಕನ್ನಡದ, ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಟಗರು ಪಲ್ಯ ಸಿನಿಮಾದ ನಾಯಕಿ ನಟಿ ಅಮ್ರತಾ ಪ್ರೇಮ್ ವಿಶೇಷ ಸಂದರ್ಶನ ಇಲ್ಲಿದೆ, ನೋಡಿ ಆನಂದಿಸಿ.
ಅಂದು ನಮಗೆ ಮಗಳು ಹುಟ್ಟಿದ್ದೇ ದೀಪಾವಳಿ ಎಂಬಂತಾಗಿತ್ತು. ಮಗಳು ಅಮ್ರತಾ ಹುಟ್ಟಿದಾಗ ಮನೆಯಲ್ಲಿ ಬಡತನ ಇತ್ತು. ಆದರೆ ಮಗಳು ಮನೆಗೆ ಸಂತೋಷ ತಂದಳು. ಆದರೆ, ಮಗ ಏಕಾಂತ್ ಹುಟ್ಟಿದಾಗ ಮನೆಯಲ್ಲಿ ಶ್ರೀಮಂತಿಕೆ ಇತ್ತು, ಹೀಗಾಗಿ ಮಗ ಸಂಪತ್ತು ತಂದ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ' ಎಂದಿದ್ದಾರೆ ನಟ ಲವ್ಲಿ ಸ್ಟಾರ್ ಪ್ರೇಮ್. ನಟಿ ಅಮ್ರತಾ ಸ್ಯಾಂಡಲ್‌ವುಡ್ ವೀಕ್ಷಕರಿಗೆ ದೀಪಾವಳಿ ಶುಭಾಶಯ ಕೋರಿದ್ದು, ಜತೆಜತೆಗೇ ಸಾಕಷ್ಟು ಅನುಭವ ಹಂಚಿಕೊಂಡಿದ್ದಾರೆ.