ಸರ್ಜರಿ ಅಗತ್ಯ.. ಆಪರೇಷನ್ ಆಗದಿದ್ದರೆ ಭವಿಷ್ಯ ಅಪಾಯ: ದರ್ಶನ್‌ಗೆ ಸೋಮವಾರ ಸಂಕಟ!

ದರ್ಶನ್ ದಿಕ್ಕೆಟ್ಟು ಕುಂತಿದ್ದಾನೆ. ಮುಂದೇನು ಕಾದಿದೆ ಎನ್ನುವ ಆತಂಕದಲ್ಲಿದ್ದಾನೆ. ಒಂದೇ ಸಲಕ್ಕೆ ಮೂರು ಮೂರು ಕಂಟಕ ಕಣ್ಣೆದುರಿಗೆ ಕುಣಿಯುತ್ತಿವೆ. ಅಲ್ಲಿಂದ ಪಾರಾದರೆ ಇದು...ಇಲ್ಲಿಂದ ಪಾರಾದರೆ ಅದು... ಮುತ್ತಿಕೊಳ್ಳುತ್ತಿದೆ. 

First Published Nov 17, 2024, 4:34 PM IST | Last Updated Nov 17, 2024, 4:34 PM IST

ದರ್ಶನ್ ದಿಕ್ಕೆಟ್ಟು ಕುಂತಿದ್ದಾನೆ. ಮುಂದೇನು ಕಾದಿದೆ ಎನ್ನುವ ಆತಂಕದಲ್ಲಿದ್ದಾನೆ. ಒಂದೇ ಸಲಕ್ಕೆ ಮೂರು ಮೂರು ಕಂಟಕ ಕಣ್ಣೆದುರಿಗೆ ಕುಣಿಯುತ್ತಿವೆ. ಅಲ್ಲಿಂದ ಪಾರಾದರೆ ಇದು...ಇಲ್ಲಿಂದ ಪಾರಾದರೆ ಅದು... ಮುತ್ತಿಕೊಳ್ಳುತ್ತಿದೆ. ಕಾರಣ ವಕೀಲರು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ. ಏನಾಗಲಿದೆ ದರ್ಶನ್ ಮಧ್ಯಂತರ ಜಾಮೀನು ? ಸರ್ಜರಿ ಮಾಡಿಸಿಕೊಂಡು ಪಾರಾಗುತ್ತಾನಾ ದಾಸ ? ಸರ್ಜರಿಯಾದರೆ ಭವಿಷ್ಯ ಕರಾಳ ಯಾಕಾಗಲಿದೆ ? ಆ ಸೂಪರ್ ಎಕ್ಸ್ಕ್ಲೂಸಿವ್ ಸ್ಟೋರಿ ನಿಮ್ಮ ಮುಂದೆ. ದನ್ನೇ ನೋಡಿ ವಿಧಿಯಾಟ. ನಾವು ಬಯಸೋದು ಒಂದು...ಆಗೋದೇ ಇನ್ನೊಂದು. ಏನೋ ಮಾಡಲು ಹೋಗಿ ಇನ್ನೇನೊ ಮಾಡಿಕೊಂಡನಾ ದಾಸ ? ಹೇಗಾದರೂ ಜೈಲಿನಿಂದ ಪಾರಾದರೆ ಸಾಕು ಎನ್ನುವ ಹಠದಲ್ಲಿ ಹುದುಲಿಗೆ ಬಿದ್ದನಾ ? 

ಈತನ ನವರಂಗಿ ಆಟಕ್ಕೆ ವಕೀಲರು ಹಾಗೂ ಪೊಲೀಸರು ಯಾವ ರೀತಿ ನಾಕಾಬಂದಿ ಹಾಕುತ್ತಿದ್ದಾರೆ ? ಇದಕ್ಕೆಲ್ಲ ಒಂದೊದೇ ಉತ್ತರ ಸಿಗುತ್ತಿದೆ. ಸದ್ಯಕ್ಕೆ ಬಿಜಿಎಸ್ ಆಸ್ಪತ್ರೆ ಮೇಲೆ ಮಲಗಿರುವ ದಚ್ಚು ಕಣ್ಣಲ್ಲಿ ಕವಡೆ ಹಾಕಿ ಪವಡಿಸಿದ್ದಾನೆ ಶನಿದೇವ. ಮಧ್ಯಂತರ ಜಾಮೀನು. ಹೈ ಕೋರ್ಟ್ ಅಸ್ತು ಎಂದಿತು. ಅದಕ್ಕೆ ಕೊಟ್ಟ ಕಾರಣಗಳನ್ನು ಕೇಳಿ ಒಪ್ಪಿಕೊಂಡಿತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್‌ಗೆ ಬೆನ್ನು ನೋವು ತೀವ್ರವಾಗಿದೆ. ಅದಕ್ಕೆ ಆಪರೇಶನ್ ಅಗತ್ಯ. ತಕ್ಷಣ ಸರ್ಜರಿ ಮಾಡಿಸಿಕೊಳ್ಳದಿದ್ದರೆ ಆತನ ಭವಿಷ್ಯಕ್ಕೆ ಬರಗಾಲ ಕಾಲಿಡುತ್ತದೆ. ಲಕ್ವಾ ಹೊಡೆದು ಕೊನೇವರೆಗೆ ಹಾಸಿಗೆ ಮೇಲೆ ಅಂಗಾತ ಮಲಗಬೇಕಾಗುತ್ತದೆ. 

ಬಳ್ಳಾರಿ ಆಸ್ಪತ್ರೆಯಲ್ಲಿ ಅದು ಸಾಧ್ಯ ಇಲ್ಲ. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳಿಸಿ...ದಚ್ಚು ವಕೀಲರು ಮನವಿ ಮಾಡಿಕೊಂಡಿದ್ದರು. ಹೈ ಕೋರ್ಟ್ ತಥಾಸ್ತು ಎಂದಿತು. ಆ ಕ್ಷಣ ದಾಸ ಬುಳುಬುಳು ನಕ್ಕುಬಿಡಬೇಕಾ?. ಬೆಂಗಳೂರಿಗೆ ಕಾಲಿಟ್ಟು ಹನ್ನೆರಡು ದಿನ. ಬಿಜಿಎಸ್ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಹತ್ತು ದಿನದಿಂದ ಫಿಸಿಯೋಥೆರಪಿ ನಡೆಯುತ್ತಿದೆ. ಆದರೆ ಸರ್ಜರಿ ಮಾತೇ ಆಡುತ್ತಿಲ್ಲ ವೈದ್ಯರು. ಫಿಸಿಯೋಥೆರಪಿ ಹಾಗೂ ಮಾತ್ರೆಗಳಿಂದ ಗುಣ ಪಡಿಸಿ ಅನ್ನೋದು ದಾಸನ ವಾದ. ಒತ್ತಡಕ್ಕೆ ಮಣಿದೋ...ಇನ್ಯಾವುದಕ್ಕೋ ಕುಣಿದೋ...ವೈದ್ಯರು ಹತ್ತು ದಿನಗಳಿಂದ ಅದೇ ರಾಗ ಅದೇ ಹಾಡಿಗೆ ಕೋರಸ್ ಬಾರಿಸುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಮಯವನ್ನು ಕೊಲ್ಲುತ್ತಾ...ದಿನ ಕಳೆಯೋದು.

ಕೊನೆಗೆ ಖಾಯಂ ಜಾಮೀನು ಪಡೆದು ಶೆಡ್‌ನಲ್ಲಿ ಮತ್ತೆ ಟೆಂಟ್ ಹಾಕೋದು..ಇದು ಅಸಲಿ ಅಜೆಂಡಾನಾ? ಇಷ್ಟು ದಿನ ಆಡಿದ ನವರಂಗಿ ಆಟಕ್ಕೆ ಫುಲ್‌ಸ್ಟಾಪ್ ಬೀಳಲಿದೆ. ಕಾರಣ ಖಾಕಿ ಪಡೆ ಮೈ ಕೊಡವಿ ಎದ್ದು ನಿಂತಿದೆ. ಜಾಮೀನು ಸಿಕ್ಕ ದಿನವೇ ಪೊಲೀಸ್ ಇಲಾಖೆ ಗೃಹ ಇಲಾಖೆಗೆ ಪತ್ರ ಬರೆದಿತ್ತು. `ಈ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಕೇಳಿಕೊಂಡಿತ್ತು. ಆದರೆ ಅಲ್ಲಿಂದ ಕೆಮ್ಮುವ ಸದ್ದು ಕೇಳಿರಲಿಲ್ಲ. ಎರಡು ದಿನದ ಹಿಂದೆ ಕೊನೆಗೂ ಗೃಹ ಮಂತ್ರಿ ಪರಮೇಶ್ವರ್ ಗುಡುಗಿದರು. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನಮ್ಮದೇನೂ ಅಭ್ಯಂತರ ಇಲ್ಲ. 

Video Top Stories