'ಚಿಕ್ಕಬಳ್ಳಾಪುರ ಉತ್ಸವ'ಕ್ಕೆ ಸ್ಟಾರ್ ಕಳೆ ತಂದ ಸುದೀಪ್: ಕಿಚ್ಚನ ಎಂಟ್ರಿಗೆ ಫ್ಯಾನ್ಸ್ ಹರ್ಷೋದ್ಗಾರ

ಚಿಕ್ಕಬಳ್ಳಾಪುರ ಉತ್ಸವಕ್ಕೆ ಜನವರಿ 7ರಂದು ಅದ್ದೂರಿಯಾಗಿ ಚಾಲನೆ ದೊರೆತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
 

Share this Video
  • FB
  • Linkdin
  • Whatsapp

'ಚಿಕ್ಕಬಳ್ಳಾಪುರ ಉತ್ಸವ' ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್‌ ಸ್ಟಾರ್‌ ಕಳೆ ತುಂಬಿದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ಕಿಚ್ಚ ಸುದೀಪ್‌ ಆಗಮಿಸಿ, ಸಿಎಂ ಜತೆಗೆ ವೇದಿಕೆ ಅಲಂಕರಿಸಿದರು. ಸುದೀಪ್‌ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ, ನೆರೆದಿದ್ದ ಸಭಿಕರು, ಅಭಿಮಾನಿಗಳು ಕಿಚ್ಚ ಕಿಚ್ಚ ಎಂಬ ಘೋಷಣೆ ಕೂಗಿದರು. ಈ ವೇಳೆ ಕೋವಿಡ್‌ ಸಮಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಚಿವರನ್ನು ಸುದೀಪ್‌ ಶ್ಲಾಘಿಸಿದರು.

Related Video