ಡಾ ರಾಜ್‌ಕುಮಾರ್ ಅಪಹರಣ: ಆ 108 ದಿನಗಳು, ಹೇಗಿತ್ತು ಸಿ.ಎಂ ಕೃಷ್ಣ ಹೋರಾಟ?
ಡಾ. ರಾಜ್‌ಕುಮಾರ್ ಅವರ ಅಪಹರಣದ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಎದುರಿಸಿದ ಸವಾಲುಗಳನ್ನು ಈ ಲೇಖನವು ವಿವರಿಸುತ್ತದೆ. ಕೃಷ್ಣ ಅವರು ಜನರ ಆಕ್ರೋಶ ಮತ್ತು ವೀರಪ್ಪನ್‌ನಿಂದ ರಾಜ್‌ಕುಮಾರ್ ಅವರನ್ನು ಬಿಡಿಸಿಕೊಳ್ಳುವ ಒತ್ತಡವನ್ನು ಹೇಗೆ ನಿಭಾಯಿಸಿದರು ಎಂಬುದನ್ನು ಒಳಗೊಂಡಿದೆ.
ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (SM Krishna) ಕರುನಾಡಿಗೆ ಹಲವು ಕೊಡುಗೆಗಳನ್ನ ಕೊಟ್ಟಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಕೂಡ ಕೃಷ್ಣರಿಂದ ಒಂದು ಬಹುಮುಖ್ಯವಾದ ಕೊಡುಗೆ ಇದೆ. ವರನಟ ಡಾ.ರಾಜ್ಕುಮಾರ್ರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದಾಗ, ಎಸ್.ಎಂ ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ರು. ಅಣ್ಣಾವ್ರನ್ನ ನರಹಂತಕನ ಕೈಯಿಂದ ಬಚಾವ್ ಮಾಡಿ ತರುವ ಗುರುತರ ಜವಾಬ್ದಾರಿ ಕೃಷ್ಣ ಮೇಲಿತ್ತು.. ಆ ಸವಾಲನ್ನ ಕೃಷ್ಣ ಎದುರಿಸಿದ್ದು ಹೇಗೆ..? ಆ 108 ದಿನಗಳ ಕಾಲ ಏನೆಲ್ಲಾ ನಡೀತು..? ರಜನಿಕಾಂತ್ , ಅಂಬರೀಷ್ ಜೊತೆ ಎಸ್.ಎಂ ಕೃಷ್ಣ ಮಾಡಿಕೊಂಡ ಒಪ್ಪಂದ ಏನಿತ್ತು..? ಆ ಕುರಿತ ಅಪರೂಪದ ಸ್ಟೋರಿ ಇಲ್ಲಿದೆ ನೋಡಿ.
ಹೌದು, ನಮ್ಮನ್ನಗಲಿರೋ ಧೀಮಂತ ರಾಜಕಾರಣಿ ಎಸ್.ಎಂ. ಕೃಷ್ಣ, ಅವರ ರಾಜಕೀಯ ಜೀವನದಲ್ಲಿ ಹಲವು ಸವಾಲು ಎದುರಿಸಿದ್ದಾರೆ. ಆದ್ರೆ ಖುದ್ದು ಕೃಷ್ಣ ಹೇಳಿಕೊಂಡ ಪ್ರಕಾರ ಅವರ ಬದುಕಿನಲ್ಲಿ ಎದುರಿಸಿದ ಅತಿದೊಡ್ಡ, ಆತಂಕ ಸವಾಲು ಅಂದ್ರೆ ಡಾ.ರಾಜ್‌ಕುಮಾರ್ ಅಪಹರಣದ ಎಪಿಸೋಡ್. 2000ನೇ ಇಸವಿಯಲ್ಲಿ ಕಾಡುಗಳ್ಳ ವೀರಪ್ಪನ್ ಕರ್ನಾಟಕ ರತ್ನ ರಾಜ್ಕುಮಾರ್ರನ್ನ ಕಿಡ್ನಾಪ್ ಮಾಡಿದಾಗ ಇದೇ ಎಸ್.ಎಂ ಕೃಷ್ಣ ಸಿಎಂ ಆಗಿದ್ರು.
ಡಾ.ರಾಜ್‌ಕುಮಾರ್ ಕಿಡ್ನಾಪ್ ಸುದ್ದಿ ಕೇಳಿ ರೊಚ್ಚಿಗೆದ್ದಿದ್ದ ಜನತೆಯನ್ನ ನಿಭಾಯಿಸೋ ಸವಾಲು, ಅಂಥಾ ನರಹಂತಕನ ಕಪಿಮುಷ್ಠಿಯಿಂದ ಅಣ್ಣಾವ್ರನ್ನ ಮರಳಿ ಕರೆತರುವ ಸವಾಲು ಕೃಷ್ಣ ಎದುರಿಗಿದ್ವು. ಆ 108 ದಿನಗಳ ಕಾಲ ಕೃಷ್ಣ ಅಕ್ಷರಶಃ ನಿದ್ದೆಯಿಲ್ಲದೇ ಕಳೆದಿದ್ರು. ಬಹುಶಃ ಯಾವ ಮುಖ್ಯಮಂತ್ರಿ ಕೂಡ ಎದುರಿಸದ ಕಠಿಣ ಸವಾಲೊಂದನ್ನ ಕೃಷ್ಣ ಎದುರಿಸಿದ್ರು. ಎಲ್ಲ ಮಾಹಿತಿಗಾಗಿ ವಿಡಿಯೋ ನೋಡಿ..