Yuva Rajkumar: ಯುವ ರಾಜ್ ಕುಮಾರ್‌ಗೆ ಸಿಕ್ಕ ಗೊಂಬೆ: ಕನ್ನಡಿಗರ ಹೃದಯ ಗೆಲ್ತಾರಾ 'ಹೃದಯಂ' ಬ್ಯೂಟಿ.?

ಸಂಕ್ರಮಣದಲ್ಲಿ ಯುವ ರಾಜ್ ಕುಮಾರ್ ಹೊಸ ಸಿನಿಮಾ ಸೆಟ್ಟೇರಲಿದೆ. ಚಿತ್ರದ ನಾಯಕಿಯಾಗಿ ಕಲ್ಯಾಣಿ ಪ್ರಿಯದರ್ಶಿನಿ ಆಯ್ಕೆ ಆಗಿದ್ದಾರಂತೆ.

Share this Video
  • FB
  • Linkdin
  • Whatsapp

ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರಾಜ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸೋ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದಕ್ಕೆಲ್ಲಾ ತಯಾರಿ ಕೂಡ ನಡೆದಿದೆ. ಧನುರ್ಮಾಸ ಕಳೆದು, ಸಂಕ್ರಮಣದಲ್ಲಿ ಯುವನ ಹೊಸ ಸಿನಿಮಾ ಸೆಟ್ಟೇರಲಿದೆ. ಆದ್ರೆ ಆ ದಿನ ಯುವನಿಗೆ ನಾಯಕಿ ಯಾರು ಅನ್ನೋ ಸೀಕ್ರೆಟ್ ರಿವೀಲ್ ಮಾಡೋ ಜವಾಬ್ದಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್'ಗೆ ಇದೆ. ಹೀಗಾಗಿ ಇಷ್ಟು ದಿನ ಯುವನಿಗೆ ಹೀರೋಯಿನ್ ಹುಡುಕಾಟ ಮಾಡಿರೋ ನಿರ್ದೇಶಕ ಸಂತೋಷ್ ಆನಂದ್ ರಾಮ್, ಈಗ ಒಬ್ಬರು ಗೊಂಬೆಯಂತ ಹುಡುಗಿಯನ್ನ ಯುವನಿಗೆ ನಾಯಕಿಯನ್ನಾಗಿ ಫೈನಲ್ ಮಾಡಿದ್ದಾರಂತೆ. ಆ ಹೆಸರೇ ಕಲ್ಯಾಣಿ ಪ್ರಿಯದರ್ಶಿನಿ. ಇವರು ಮಲೆಯಾಳಂ ಚಿತ್ರರಂಗದಲ್ಲಿ ಈಗ ಶೈನಿಂಗ್ ಆಗ್ತಿರೋ ಸುಂದರಿ.. ಮಲಯಾಳಂ ಚಿತ್ರರಂಗದಲ್ಲಿ ಹೃದಯಂ ಸಿನಿಮಾ ಮೂಲಕ ಎಲ್ಲರ ಹೃದಯ ಗೆದ್ದಿರೋ ಕಲ್ಯಾಣಿ ಪ್ರಿಯದರ್ಶಿನಿ ಈಗ ಯುವನ ಮೊದಲ ಸಿನಿಮಾಗೆ ನಾಯಕಿ ಆಗುತ್ತಿದ್ದು ಕನ್ನಡಕ್ಕೂ ಬರ್ತಿದ್ದಾರಂತೆ.

Related Video